ಮೈಸೂರಿನಲ್ಲಿ ಮಿತಿ ಮೀರಿದ ವಾಹನಗಳ ಸಂಚಾರ : 300 ವಾಹನಗಳನ್ನ ಸೀಜ್ ಮಾಡಿದ ಪೊಲೀಸರು…

ಮೈಸೂರು,ಏಪ್ರಿಲ್,30,2021(www.justkannada.in):  ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಾಹನಗಳ ಸಂಚಾರ ಮಿತಿ ಮೀರಿದ ಹಿನ್ನೆಲೆ ಬರೊಬ್ಬರಿ  300 ವಾಹನಗಳನ್ನ ಮೈಸೂರು ಪೊಲೀಸರು ಸೀಜ್ ಮಾಡಿದ್ದಾರೆ.jk

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿದ್ದು ನಂತರ ಎಲ್ಲವೂ ಬಂದ್ ಆಗಬೇಕು.  ಆದರೆ ಮೈಸೂರಿನಲ್ಲಿ ಐಡಿ ಕಾರ್ಡ್, ಮೆಡಿಕಲ್ ಚೀಟಿ ಹಿಡಿದು ಜನರು ಹೊರಗೆ ಬರುತ್ತಿದ್ದು, ಮಾರ್ಕೆಟ್‌ಗೆ ಬಂದೆ, ಇಂಜೆಕ್ಷನ್‌ಗೆ ಬಂದೆ ಎಂದು ಕುಂಟು ನೆಪ ಹೇಳಿತ್ತಿರುವ ಜನರಿಗೆ ಇದೀಗ ಪೊಲೀಸರು ಶಾಕ್ ನೀಡಿದ್ದಾರೆ.

ಅನಗತ್ಯವಾಗಿ ಓಡಾಡುತ್ತಿದ್ದ ಹಿನ್ನೆಲೆ ಮೈಸೂರು ನಗರ ಪೊಲೀಸರು ಬರೊಬ್ಬರಿ 300 ವಾಹನ ಸೀಜ್ ಮಾಡಿದ್ದು, ನಗರದಾದ್ಯಂತ ಎಲ್ಲ ಮುಖ್ಯ ರಸ್ತೆ ಬಂದ್ ಮಾಡಿದ್ದಾರೆ. ಹೀಗಾಗಿ KR ಆಸ್ಪತ್ರೆಯ ಆಯುರ್ವೇದಿಕ್ ಸರ್ಕಲ್ ಮೂಲಕವೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ.Traffic – Mysore-police-Siege - 300 vehicles

ಈ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನಗರದಲ್ಲಿ ಎಮರ್ಜೆನ್ಸಿಗಾಗಿ ವಾಹನ ಸಂಚಾರ ಆಗ್ತಿದೆ. ಕೆಲವರು ಅನಗತ್ಯವಾಗಿ ಹೊರಗೆ ಬರ್ತಿದ್ದಾರೆ. ಅಂತವರ ವಾಹನವನ್ನ ಈಗಾಗಲೇ ಸೀಜ್ ಮಾಡಿದ್ದೇವೆ. ಅನಗತ್ಯವಾಗಿ ಹೊರಗೆ ಬಾರದಂತೆ ಸೂಚನೆ ಕೊಟ್ಟಿದ್ದೇವೆ. ಆದರೂ ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕ ಎಲ್ಲಾ ಕಡೆ ಕರ್ಪ್ಯೂ ಚೆನ್ನಾಗಿಯೇ ಇದೆ. ನಾವು ಪ್ರಮುಖ ರಸ್ತೆ ಬಂದ್ ಮಾಡಿದ್ದೇವೆ. ತೀರ ಅವಶ್ಯಕತೆ ಇರೋರು, ವಿನಾಯಿತಿ ಇರುವ ಸೆಕ್ಟರ್ ಗಳ ಸಿಬ್ಬಂದಿ ಓಡಾಟ ಇದೆ. ಅದಕ್ಕೂ ಅವಕಾಶ  ನೀಡಲಾಗಿದೆ ಎಂದು ತಿಳಿಸಿದ್ದಾರೆ.

ENGLISH SUMMARY…

No control over movement of vehicles in Mysuru: Police seize 300 vehicles
Mysuru, Apr. 30, 2021 (www.justkannada.in): Hundreds of vehicles were on roads in Mysuru today despite Janata Curfew is imposed. As a result, the police seized nearly 300 vehicles.
The government has permitted services of essential commodities from 6.00 am to 10.00 am and has instructed that everything should be closed after that. But many people in Mysuru city were found to be roaming around in vehicles producing ID cards, prescription slips, etc. Many of them were found to be giving useless excuses.
Following this, the police seized 300 vehicles and closed all the main roads in the city. As a result of this, all the vehicles should compulsorily pass through the K.R. Hospital Ayurvedic circle.
Speaking to the media persons Police Commissioner Dr. Chandragupta informed that permission is given for vehicles in case of emergency. But many people are coming out unnecessarily and hence we have seized the vehicles. We have given instructions to the people not to come out of the houses without proper reason. We are taking legal action against those who come out unnecessarily. The curfew has been successful in almost all areas. We have now closed the main junction. Only emergency services will be allowed, he added.
Keywords: Mysuru city/ janata curfew/ police seize 300 vehicles

Key words: Traffic – Mysore-police-Siege – 300 vehicles