50% Discount on Pending Traffic Fines:  78 ಪ್ರಕರಣ, ಬರೋಬ್ಬರಿ 36 ಸಾವಿರ  ರೂ. ಪಾವತಿಸಿದ ಸ್ಕೂಟಿ ಮಾಲೀಕ..!

After the state government announced a 50% discount on traffic violation fines, motorists are rushing to pay fines. The owner of a vehicle in the city's N. R. Traffic police station has paid a whopping Rs. 36 thousand. A total of 78 cases were registered against two-wheelers (scooty). Out of all these cases, most of the complaints were for riding without a helmet. A total of Rs. 72 thousand had to be paid as fines for 78 violation cases. But now, in the wake of the state government's new offer, only 50 percent of the fine can be paid. In this context, the vehicle owner has paid an amount of Rs. 36 thousand and made a one-time settlement.

 ಮೈಸೂರು, ಆ.೨೩,೨೦೨೫:  ರಾಜ್ಯ ಸರ್ಕಾರ ಸಂಚಾರ ಉಲ್ಲಂಘನೆ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ವಾಹನ ಸವಾರರು ದಂಡ ಪಾವತಿಗೆ ಮುಗಿ ಬೀಳುತ್ತಿದ್ದಾರೆ. ನಗರದ ಎನ್. ಆರ್.‌ ಸಂಚಾರಿ ಠಾಣೆ ಪೊಲೀಸ್‌ ವ್ಯಾಪ್ತಿಯಲ್ಲಿ ವಾಹನವೊಂದರ ಮಾಲೀಕರು ಬರೋಬ್ಬರಿ ೩೬ ಸಾವಿರ  ರೂ. ಪಾವತಿಸಿದ್ದಾರೆ.

ದ್ವಿಚಕ್ರವಾಹನ (ಸ್ಕೂಟಿ)ದ ಮೇಲೆ ಒಟ್ಟು ೭೮ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳ ಪೈಕಿ ಬಹುತೇಕ ದೂರು ಹೆಲ್ಮೆಟ್‌ ರಹಿತ ಚಾಲನೆಯದ್ದೆ ಆಗಿತ್ತು. ೭೮  ಉಲ್ಲಂಘನೆ ಪ್ರಕರಣಗಳಿಂದ ಒಟ್ಟು ದಂಡದ ರೂಪದಲ್ಲಿ ೭೨ ಸಾವಿರ ರೂ.ಗಳನ್ನು ಪಾವತಿಸಬೇಕಾಗಿತ್ತು. ಆದರೆ ಈಗ ರಾಜ್ಯ ಸರಕಾರದ ಹೊಸ ಆಫರ್‌ ಹಿನ್ನೆಲೆಯಲ್ಲಿ ದಂಡದ ಶೇ.೫೦ ರಷ್ಟು ಮೊತ್ತವನ್ನು ಮಾತ್ರ ಪಾವತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ವಾಹನದ ಮಾಲೀಕರು ೩೬ ಸಾವಿರ ರೂ. ಮೊತ್ತ ಪಾವತಿಸಿ ಒನ್‌ ಟೈಮ್‌ ಸೆಟಲ್ಮೆಂಟ್‌ ಮಾಡಿಕೊಂಡಿದ್ದಾರೆ.

ಸವಾರರ ಸ್ಪಂಧನೆ:

ರಾಜ್ಯ ಸರಕಾರದ ಒನ್‌ ಟೈಮ್‌ ಸೆಟಲ್ಮೆಂಟ್‌ ಗೆ ವಾಹನ ಸವಾರರು ಸ್ಪಂಧಿಸುತ್ತಿದ್ದಾರೆ. ಖುದ್ದು ದಂಡ ಪಾವತಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಒಟ್ಟು ದಂಡದ ಮೊತ್ತ ಎಷ್ಟು ಸಂಗ್ರಹಗೊಂಡಿದೆ ಎಂಬ ವಿವರಗಳನ್ನು ಮಾಧ್ಯಮಗಳಿಗೆ ನೀಡುವುದಾಗಿ ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಟ್ಕರ್‌ “ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿದರು.

vtu

ಒನ್‌ ಟೈಮ್‌ ಸೆಟಲ್ಮೆಂಟ್‌:

ನಾಗರಿಕರು ತಮ್ಮ ಬಾಕಿ ಹಣವನ್ನು ಅರ್ಧದಷ್ಟು ಪಾವತಿಸಲು ರಾಜ್ಯ ಸರಕಾರ ಅವಕಾಶ ನೀಡಿದೆ. ಈ ವಿಶೇಷ ಕೊಡುಗೆ ಆಗಸ್ಟ್ 23 ರಿಂದ ಸೆಪ್ಟೆಂಬರ್ 12, 2025 ರವರೆಗೆ ಮಾನ್ಯವಾಗಿರುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಈ ಕ್ರಮ ಬಾಕಿ ಇರುವ ದಂಡವನ್ನು ಹೊಂದಿರುವ ಲಕ್ಷಾಂತರ ವಾಹನ ಚಾಲಕರಿಗೆ ಪ್ರಯೋಜನ ನೀಡುತ್ತದೆ ಮತ್ತು ಸಂಚಾರ ನಿಯಮಗಳನ್ನು ಸಕಾಲಿಕವಾಗಿ ಪಾಲಿಸಲು ಪ್ರೋತ್ಸಾಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ರಿಯಾಯಿತಿಗೆ ಯಾರು ಅರ್ಹರು?

ಅಧಿಕೃತ ಆದೇಶದ ಪ್ರಕಾರ, ಫೆಬ್ರವರಿ 11, 2023 ರವರೆಗೆ ದಾಖಲಾದ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ. ಈ ದಿನಾಂಕದ ನಂತರ ದಾಖಲಾದ ಪ್ರಕರಣಗಳು ಅರ್ಹವಾಗಿರುವುದಿಲ್ಲ. ಬಾಕಿ ಇರುವ ದಂಡದ ಹೊರೆಯನ್ನು ಕಡಿಮೆ ಮಾಡಲು ಮತ್ತು ರಾಜ್ಯಾದ್ಯಂತ ಹೆಚ್ಚುತ್ತಿರುವ ಸಂಚಾರ ಉಲ್ಲಂಘನೆಗಳನ್ನು ತಡೆಯಲು ಸರ್ಕಾರ ಈ ಯೋಜನೆಯನ್ನು ನಿರ್ಧರಿಸಿದೆ.

ಹಿಂದಿನ ಯೋಜನೆಯಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಯಿತು

ಹಿಂದೆ ಇದೇ ರೀತಿಯ ರಿಯಾಯಿತಿ ಉಪಕ್ರಮವು ಲಕ್ಷಾಂತರ ವಾಹನ ಮಾಲೀಕರು ತಮ್ಮ ಬಾಕಿಗಳನ್ನು ಪಾವತಿಸಲು ಸಹಾಯ ಮಾಡಿತ್ತು. ಈ ಹೊಸ ಯೋಜನೆಯೊಂದಿಗೆ, ಸಾರಿಗೆ ಇಲಾಖೆಯು ಗಡುವಿನ ಮೊದಲು ಅವಕಾಶವನ್ನು ಬಳಸಿಕೊಳ್ಳುವಂತೆ ಜನರಿಗೆ ಮನವಿ ಮಾಡಿದೆ. ದಂಡವನ್ನು ಆನ್‌ಲೈನ್‌ ಮೂಲಕ ಅಥವಾ ಸಂಚಾರ ಪೊಲೀಸ್ ಠಾಣೆಗಳಲ್ಲಿ ಪಾವತಿಸಬಹುದು.

ಪೊಲೀಸರಿಗೆ ಸಿಕ್ಕಿಬಿದ್ದರೆ ಪೂರ್ಣ ದಂಡ

ರಿಯಾಯಿತಿ ಅವಧಿಯ ನಂತರವೂ ಪೊಲೀಸರಿಂದ ಸಿಕ್ಕಿಬಿದ್ದವರು, ತಮ್ಮ ಬಾಕಿ ಇರುವ ದಂಡವನ್ನು ಪಾವತಿಸದೆ, ಪೂರ್ಣ ದಂಡದ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪಾವತಿ ಮಾಡದಿರುವುದು ವಾಹನ ವಶಪಡಿಸಿಕೊಳ್ಳಲು ಕಾರಣವಾಗಬಹುದು, ನ್ಯಾಯಾಲಯದ ವಿಚಾರಣೆಗಳು ಮತ್ತು ಬಿಡುಗಡೆಗಾಗಿ ಸಂಪೂರ್ಣ ಪಾವತಿಯನ್ನು ಮಾಡಬೇಕಾಗುತ್ತದೆ.

key words: 50% Discount, Pending Traffic Fines, 78 cases, N.R.Traffic police station, Mysore.

vtu

SUMMARY: 

50% Discount on Pending Traffic Fines: 78 cases, a total of Rs. 36 thousand. Scooty owner paid!

After the state government announced a 50% discount on traffic violation fines, motorists are rushing to pay fines. The owner of a vehicle in the city’s N. R. Traffic police station has paid a whopping Rs. 36 thousand.

A total of 78 cases were registered against two-wheelers (scooty). Out of all these cases, most of the complaints were for riding without a helmet. A total of Rs. 72 thousand had to be paid as fines for 78 violation cases. But now, in the wake of the state government’s new offer, only 50 percent of the fine can be paid. In this context, the vehicle owner has paid an amount of Rs. 36 thousand and made a one-time settlement.