ಬೆಂಗಳೂರು ರಸ್ತೆಗಳಲ್ಲಿ ಟ್ರ್ಯಾಕ್ಟರ್ ಗಳ ನಿರ್ಬಂಧ: ಸರ್ಕಾರದ ನಡೆ ಖಂಡಿಸಿ ಚಾಲಕರು ಮಾಲೀಕರಿಂದ ಪ್ರತಿಭಟನೆ.

ಬೆಂಗಳೂರು,ಫೆಬ್ರವರಿ,9,2023(www.justkannada.in): ಬೆಂಗಳೂರು ರಸ್ತೆಗಳಲ್ಲಿ ಟ್ರ್ಯಾಕ್ಟರ್ ಗಳ ಓಡಾಟ ನಿರ್ಬಂಧಿಸಿರುವ ಸರ್ಕಾರದ ನಡೆಯನ್ನ ಖಂಡಿಸಿ ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರು ಇಂದು ಪ್ರತಿಭಟನೆಗೆ ನಡೆಸಿದ್ದಾರೆ.

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಟ್ರ್ಯಾಕ್ಟರ್ ಮಾಲೀಕರು, ಚಾಲಕರು ಮುಂದಾಗಿದ್ದು, ಈ ವೇಳೆ ಅವರನ್ನ ಪೊಲೀಸರು ತಡೆದರು. ನಡುರಸ್ತೆಯಲ್ಲಿ ಮಲಗಿ ಟ್ರ್ಯಾಕ್ಟರ್ ಚಾಲಕರು ಪ್ರತಿಭಟನೆ ನಡೆಸಿದರು.

ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಯುತ್ತಿದ್ದು,  ಪ್ರತಿಭಟನೆಯಲ್ಲಿ ನೂರಾರು ಮಾಲೀಕರು, ಚಾಲಕರು ಕಟ್ಟಡ ಕಾರ್ಮಿಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Key words: tractors Bangalore –roads- restriction-Protest – drivers- owners