ಟ್ರಾಕ್ಟರ್ ಗೆ  ಶಾಸಕನ ಕಾರು ಡಿಕ್ಕಿ: ಟ್ರಾಕ್ಟರ್ ಚಾಲಕ ಸ್ಥಳದಲ್ಲೇ ಸಾವು.

ಕೋಲಾರ,ಮೇ,31,2022(www.justkannada.in): ಟ್ರಾಕ್ಟರ್ ಗೆ  ಶಾಸಕನ ಕಾರು ಡಿಕ್ಕಿಯಾಗಿ ಟ್ರಾಕ್ಟರ್ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಕಾಂತರಾಜ ವೃತ್ತದಲ್ಲಿ ನಡೆದಿದೆ.

ಮುಳಬಾಗಲು ಮೂಲದ ಟ್ರಾಕ್ಟರ್ ಚಾಲಕ ಸುಬ್ರಮಣಿ (35)ಮೃತಪಟ್ಟವರು.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಸಿರ ಕ್ಷೇತ್ರದ ವೈಎಸ್ ಆರ್ ಕಾಂಗ್ರೆಸ್ ನ ಹಾಲಿ ಶಾಸಕ ತಿಪ್ಪೆಸ್ವಾಮಿ ಅವರ ಕಾರು ಟ್ರ್ಯಾಕ್ಟರ್ ಗೆ ಡಿಕ್ಕಿಯಾಗಿದ್ದು, ಕಾರು ಚಾಲಕನಿಗೆ ಗಾಯವಾಗಿದೆ.

ಚಾಲಕ ಕಾರನ್ನ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದು, ಮುಳಬಾಗಲು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Tractor-collides – MLA- car-driver -dies -Kolar