ತುಮಕೂರು ಜಿಲ್ಲೆಯ ಯಾವುದೇ ಪ್ರವಾಸಿ ತಾಣಗಳು ಬಂದ್ ಇಲ್ಲ.

ತುಮಕೂರು,ಡಿಸೆಂಬರ್,31,2021(www.justkannada.in):  ಒಮಿಕ್ರಾನ್ ಆತಂಕ, ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯದ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ತುಮಕೂರು ಜಿಲ್ಲೆಯ ಯಾವುದೇ ಪ್ರವಾಸಿ ತಾಣಗಳು ಬಂದ್ ಇಲ್ಲ ಎಂದು ಜಿಲ್ಲೆಯ ಎಎಸ್ ಪಿ ಉದೇಶ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಎಎಸ್ ಪಿ ಉದೇಶ್,  ತುಮಕೂರು ಜಿಲ್ಲೆಯ ಯಾವುದೇ ಪ್ರವಾಸಿ ತಾಣಗಳು ಬಂದ್ ಇಲ್ಲ ತುಮಕೂರು ತಾಲ್ಲೂಕಿನ ಪ್ರವಾಸಿ ತಾಣ ದೇವರಾಯನ ದುರ್ಗ, ನಾಮದಚಿಲುಮೆ ಎಂದಿನಂತೆ ಓಪನ್ ಇರುತ್ತೆ. ಆದರೆ ರಾತ್ರಿ ವೇಳೆ ಯಾವುದೇ ಪಾರ್ಟಿ ಮಾಡಲು ಅವಕಾಶವಿಲ್ಲ. ಜಿಲ್ಲಾದ್ಯಂತ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿರುತ್ತದೆ ಎಂದು  ತಿಳಿಸಿದ್ದಾರೆ.

ಇನ್ನು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ. ಮಂಡ್ಯ ಜಿಲ್ಲೆಯ ಮೇಲುಕೋಟೆ ಕೊರೆತೊಣ್ಣುರು. ಕುಂತಿ ಬೆಟ್ಟ ಕೆಆರ್ ಎಸ್ ಹಿನ್ನೀರು, ವೇಣುಗೋಪಾಲಸ್ವಾಮಿಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ತಹಶೀಲ್ದಾರ್ ಪ್ರಮೋದ್ ಪಾಟೀಲ್ ಆದೇಶಿಸಿದ್ದಾರೆ.

Key words: tourist –places- no ristriction-  Tumkur -district.