ನಾಳೆ ರಸ್ತೆ ಬಂದ್ ಚಳಿವಳಿ:  ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧ- ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್…

ಬೆಂಗಳೂರು,ಫೆಬ್ರವರಿ,5,2021(www.justkannada.in):  ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ನಾಳೆ ರಾಷ್ಠ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲು ರೈತ ಮುಖಂಡರು ನಿರ್ಧರಿಸಿರುವ ಹಿನ್ನೆಲೆ ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.jk

ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆದ್ದಾರಿ ತಡೆದು ಪ್ರತಿಭಟನೆಗೆ ಯಾವುದೇ ಅನುಮತಿ ಪಡೆದಿಲ್ಲ. ಸಂಕೇತಿಕವಾಗಿ 2-3 ಗಂಟೆಗಳ ಕಾಲ ಬಂದ್ ಮಾಡಬಹುದು. ಆದರೆ ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧರಿದ್ಧೇವೆ. ಅಯಾ ಅಧಿಕಾರಿಗಳ ಹಂತದಲ್ಲಿ ಭದ್ರತೆ ವಹಿಸಲಾಗುತ್ತೆ ಎಂದರು.Tomorrow – road bandh-protest-     Bangalore City -Police Commissioner -Kamal Pant

ನಾಳೆ ಶಾಂತಿ ಭಂಗಕ್ಕೆ ಅವಕಾಶ ನೀಡಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡಲು ಬಿಡುವುದಿಲ್ಲ ಎಂದು  ಕಮಲ್ ಪಂತ್ ತಿಳಿಸಿದರು.

Key words: Tomorrow – road bandh-protest-     Bangalore City -Police Commissioner -Kamal Pant