ಟೋಕಿಯೋ ಒಲಿಂಪಿಕ್ಸ್: ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಡೋಮ್ ವಿತರಣೆ ಇಲ್ಲ

ಬೆಂಗಳೂರು, ಜೂನ್ 22 (www.justkannada.in): ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಬದಲಾವಣೆ ಕಾಣಿಸಿಕೊಂಡಿದೆ.  ಈ ಬಾರಿ ಟೋಕಿಯೋ ಒಲಿಂಪಿಕ್ಸ್ ವಿಲೇಜ್ ಗಳಲ್ಲಿ ಕಾಂಡೋಮ್ ವಿತರಿಸುತ್ತಿಲ್ಲ ಎಂದು ಆಯೋಜಕರು ಹೇಳಿದ್ದಾರೆ.

ಕೋವಿಡ್ ಕಾರಣ ಕ್ರೀಡಾಪಟುಗಳು ಪರಸ್ಪರ ಸಂಪರ್ಕಿಸಲು ನಿರ್ಬಂಧವಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕ್ರೀಡಾಪಟುಗಳು ಗೇಮ್ಸ್ ಮುಗಿಸಿ ಹೊರಡುವಾಗ ಅವರಿಗೆ ಕಾಂಡೋಮ್ ಕೊಡಲಾಗುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಆಯೋಜಕರ ಈ ಹೊಸ ನಿರ್ಧಾರ 1988ರಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವೊಂದು ಕೊನೆಗೊಳ್ಳುವಂತೆ ಮಾಡಿದೆ. ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕಾಂಡೋಮ್ ವಿತರಣೆಯನ್ನು ಒಲಿಂಪಿಕ್ಸ್‌ನಲ್ಲಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗಿತ್ತು.