Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಮಕ್ಕಳಿಂದ ಶಾಲೆಯಲ್ಲಿ ಶೌಚಾಲಯ ಕ್ಲೀನಿಂಗ್: ಮತ್ತೊಂದು ಪ್ರಕರಣ ಬೆಳಕಿಗೆ.

ಮಕ್ಕಳಿಂದ ಶಾಲೆಯಲ್ಲಿ ಶೌಚಾಲಯ ಕ್ಲೀನಿಂಗ್: ಮತ್ತೊಂದು ಪ್ರಕರಣ ಬೆಳಕಿಗೆ.

ದಾವಣಗೆರೆ, ಫೆಬ್ರವರಿ,13,2024(www.justkannada.in): ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮಕ್ಕಳಿಂದ ಶಾಲಾ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಘಟನೆಗಳು ನಡೆದಿದ್ದವು. ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸದಂತೆ ಆದೇಶಿಸಿದ್ದರು. ಇದೀಗ ಮಕ್ಕಳಿಂದಲೇ ಶಾಲೆಯಲ್ಲಿ ಶೌಚಾಲಯ ಸ್ವಚ್ಚಗೊಳಿಸಿರುವ ಮತ್ತೊಂದು ಪ್ರಕರಣ  ಬೆಳಕಿಗೆ ಬಂದಿದೆ.

ದಾವಣಗೆರೆ ತಾಲೂಕಿನ‌ ಮೆಳ್ಳೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ಕ್ಕೂ ಅಧಿಕ ಬಾಲಕಿಯರು ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಾಲೆಯ ಸಮವಸ್ತ್ರದಲ್ಲಿ ಪೊರಕೆ ಹಿಡಿದು ಬಾಲಕಿಯರು ಶೌಚಾಲಯ ಸ್ವಚ್ಚಗೊಳಿಸಿದ್ದು, ವಿಡಿಯೋ ವೈರಲ್ ಆಗಿದೆ.ಮಕ್ಕಳಿಂದ ಶಾಲೆಯಲ್ಲಿ ಶೌಚಾಲಯ ಕ್ಲೀನಿಂಗ್: ಮತ್ತೊಂದು ಪ್ರಕರಣ ಬೆಳಕಿಗೆ cleanig

ಶಾಲೆಯ ಮುಖ್ಯ‌ಶಿಕ್ಷಕಿ ಹೈಸ್ಕೂಲ್ ಮಕ್ಕಳಿಂದ ಶೌಚಾಲಯ ಸ್ವಚ್ಚ ಮಾಡಿಸಿದ್ದಾರೆ. ಸ್ವತಹ ಮಹಾತ್ಮ ಗಾಂಧಿಜಿಯೇ ತಮ್ಮ ಶೌಚಾಲಯ ಸ್ವಚ್ಚ ಮಾಡಿಕೊಳ್ಳುತ್ತಿದ್ದರು. ನೀವು ಸ್ವಚ್ಚಗೊಳಿಸಿ ಎಂದು ಮುಖ್ಯ ಶಿಕ್ಷಕಿ ಸೂಚನೆ ನೀಡಿದ್ದರು ಎನ್ನಲಾಗಿದೆ. ಇನ್ನು  ಮಕ್ಕಳನ್ನ ಶೌಚಾಲಯ ಸ್ವಚ್ಚಗೊಳಿಸಲು ಬಳಸಿಕೊಳ್ಳುತ್ತಿರುವ ಶಾಲೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

Key words: Toilet -cleaning – school – children- Another case