ಇಂದು, ನಾಳೆ ವೀಕೆಂಡ್ ಕರ್ಫ್ಯೂ: ಬೆಂಗಳೂರು ಸೇರಿ ಇಡೀ ರಾಜ್ಯ ಸ್ತಬ್ಧ….

ಬೆಂಗಳೂರು,ಏಪ್ರಿಲ್,24,2021(www.justkannada.in):  ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ನೈಟ್ ಕರ್ಫ್ಯೂ,  ವೀಕೆಂಡ್ ಕರ್ಫ್ಯೂ. ಬೆಂಗಳೂರು ಸೇರಿ ರಾಜ್ಯಾದ್ಯಂತ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಬಂದ್ ಆಗಿದೆ.jk

ನಿನ್ನೆ ರಾತ್ರಿ 9 ರಿಂದಲೇ ವೀಕೆಂಡ್ ಕರ್ಫ್ಯೂ ಪ್ರಾರಂಭವಾಗಿದ್ದು ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಇನ್ನು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ತರಾತುರಿಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.

ವೀಕೆಂಡ್ ಕರ್ಫ್ಯೂ ನಲ್ಲಿ ಅಗತ್ಯ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಈ ನಡುವೆ ಔಷಧಿ, ತರಕಾರಿ, ಹಣ್ಣು, ಹಾಲು, ವೈದ್ಯಕೀಯ, ದಿನಸಿ ಅಂಗಡಿಗಳು ಹೊರತುಪಡಿಸಿದರೆ ವಾಣಿಜ್ಯ ವಹಿವಾಟುಗಳು ಬಂದ್ ಆಗಿದೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ ಲಭ್ಯವಿರಲಿದೆ.today-weekend-curfew-tomorrow-entire-state-quiet-bangalore

ಬೆಂಗಳೂರಿನ ಹಲವೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ವಾಹನಗಳನ್ನ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಇನ್ನು ಬಿಎಂಟಿಸಿ ಬಸ್ ಸೇವೆ ಸೋಮವಾರ ಬೆಳಿಗ್ಗೆ 6ವರೆಗೂ ಬಂದ್ ಆಗಿದ್ದು, ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ. ಇನ್ನು ಮೆಟ್ರೋ ಸಹ ಬಂದ್ ಆಗಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಸ್ತಬ್ಧ ವಾತಾವರಣ ಕಂಡು ಬಂದಿದೆ.

ENGLISH SUMMARY…

Weekend curfew: Entire state comes to a standstill
Bengaluru, Apr. 24, 2021 (www.justkannada.in): The state government has imposed tough rules including night curfew, weekend curfew, and tough rules in the State to break the COVID pandemic chain. As a result, all commercial activities and services have been suspended other than essential services across the state, from Friday 9 pm to Monday 6 am.
People in Mysuru were found hurrying to purchase all essential things today morning between 6 am to 10 am. Except for essential services like hospitals, laboratories, medical stores, vegetables, milk dairies, groceries all other business establishments will be closed. Only parcel services are allowed in hotels and restaurants.today-weekend-curfew-tomorrow-entire-state-quiet-bangalore
In Bengaluru, police security has been beefed up. All vehicles are being checked across Bengaluru city. BMTC bus services are also suspended till Monday 6 am. But there is no change in the movement of KSRTC buses. Namma Metro services have also been suspended. As a result, the entire state appears to have come to a stand still, remaining the beginning days of the pandemic last year.
Keywords: COVID-19 Pandemic/ State Government/ bundh/ weekend curfew/ night curfew/ Karnataka/ stand still

Key words: Today – Weekend Curfew – tomorrow-entire state – quiet-Bangalore.