ಇಂದು ಸಹ ಮೈಸೂರು ಚಾಮುಂಡಿ ಬೆಟ್ಟಕ್ಕೆ  ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ…

ಮೈಸೂರು,ಜು,20,2020(www.justkannada.in): ಇಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಸಾಧ್ಯತೆ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಪ್ರತಿ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಮೈಸೂರು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಪ್ರತೀ ಆಷಾಢ ಶುಕ್ರವಾರದ ಜೊತೆ ಶನಿವಾರ ಹಾಗೂ ಭಾನುವಾರವೂ ಸಹ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು.

ಇಂದು ಭೀಮನ ಅಮಾವಾಸ್ಯೆ  ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಹೀಗಾಗಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ತುರ್ತು ಹಾಗೂ ಗ್ರಾಮಸ್ಥರ ವಾಹನಗಳ ಹೊರತುಪಡಿಸಿ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶ  ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.today-mysore-chamundi-hill-restriction-public

ಈ ಹಿಂದೆ ಉತ್ತನಹಳ್ಳಿ ಮಾರಮ್ಮನ ದೇವಸ್ಥಾನಕ್ಕೂ ಇದೇ ನಿಯಮ ಅನ್ವಯಿಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.  ಇದೇ ನಿಯಮ ಈಗಲೂ ಸಹ ಅನ್ವಯವಾಗಲಿದ್ದು ಈ ಮೂಲಕ ಉತ್ತನಹಳ್ಳಿ ಮಾರಮ್ಮ ದೇವಸ್ಥಾನದ ವತಿಯಿಂದ ದಾನಿಗಳಿಂದ ಪ್ರಸಾದ ತಯಾರಿಗೆ ಮತ್ತು ವಿತರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನು ನಾಳೆ ಎಂದಿನಂತೆ ಚಾಮುಂಡೇಶ್ವರಿ ದೇವಾಲಯ ಸಾರ್ವಜನಿಕರಿಗೆ ತೆರೆಯಲಿದೆ.

Key words: today -Mysore – Chamundi Hill- restriction- public