ಇಂದು ಭಾರತ-ಇಂಗ್ಲೆಂಡ್ ನಡುವೆ 2ನೇ ಏಕದಿನ ಪಂದ್ಯ: ಗೆದ್ದರೆ ಸರಣಿ ಟೀಂ ಇಂಡಿಯಾ ಪಾಲು

ಬೆಂಗಳೂರು, ಮಾರ್ಚ್ 26, 2021 (www.justkannada.in): 

ಭಾರತ-ಇಂಗ್ಲೆಂಡ್ ನಡುವೆ 2ನೇ ಏಕದಿನ ಪಂದ್ಯ ಇಂದು ನಡೆಯಲಿದೆ.

ಸರಣಿಯ ಎಲ್ಲ ಪುಣೆಯಲ್ಲಿಯೇ ಎಲ್ಲಾ ಪಂದ್ಯಗಳು ನಡೆಯಲಿದ್ದು, ದ್ವಿತೀಯ ಪಂದ್ಯ ಇಂದು ಹೊನಲು ಬೆಳಕಿನಲ್ಲಿ ನಡೆಯಲಿದೆ.

ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ. ಆದರೆ ಭಾರತ ತಂಡಕ್ಕೆ ಗಾಯಾಳುಗಳ ಚಿಂತೆ ಕಾಡಿದೆ.

ಇಂದಿನ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆ ಬಹುತೇಕ ಖಚಿತವಾಗಿದೆ. ಕುಲದೀಪ್ ಯಾದವ್ ಸ್ಥಾನಕ್ಕೆ ಯಜುವೇಂದ್ರ ಚಾಹಲ್ ಪುನರಾಗಮನವಾಗಬಹುದು.