ಇಂದು ಚಿರಂಜೀವಿ ಸರ್ಜಾ ‘ಖಾಕಿ’ ಟೀಸರ್ ರಿಲೀಸ್

ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ನಟ ಚಿರಂಜೀವಿ ಸರ್ಜಾ ಅಭಿನಯದ ಖಾಕಿ ಸಿನಿಮಾ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಚಿರು ಖಡಕ್, ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಫೈಟ್ ಗೆ ಏನೂ ಕೊರತೆಯಿಲ್ಲ.

ಅಂದಹಾಗೆ ನವೀನ್ ರೆಡ್ಡಿ ಈ ಚಿತ್ರದ ನಿರ್ದೇಶಕ. ಈ ಸಿನಿಮಾ ಜತೆಗೆ ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಮತ್ತು ಶಿವಾರ್ಜುನ ಕೂಡಾ ತೆರೆಗೆ ಬರಲು ಕಾಯುತ್ತಿದೆ.