1ರಿಂದ 5ನೇ ತರಗತಿ ಶಾಲೆ ಆರಂಭ ಕುರಿತು ಇಂದು ಘೋಷಣೆ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಅಕ್ಟೋಬರ್,18,2021(www.justkannada.in):  ಪ್ರಾಥಮಿಕ ಶಾಲೆ ಆರಂಭ ಕುರಿತು ಮಧ್ಯಾಹ್ನ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಲಿದೆ. ವರದಿ ಪರಿಶೀಲಿಸಿ ಸಿಎಂ ಅಭಿಪ್ರಾಯ ಸಂಗ್ರಹಿಸಿ ಬಳಿಕ ಶಾಲೆ ಆರಂಭದ ಘೋಷಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಶಾಲೆ ಆರಂಭ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಒಂದೇ ಹಂತದಲ್ಲಿ ಪ್ರಾಥಮಿಕ ತರಗತಿ ಆರಂಭ ಮಾಡಲಾಗುತ್ತದೆ. ಇಂದು ಮಧ್ಯಾಹ್ನ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿಯನ್ನ ಪರಿಶೀಲನೆ ಮಾಡಲಾಗುತ್ತದೆ. ನಂತರ ಸಿಎಂ ಅಭಿಪ್ರಾಯ ಪಡೆದು ಮಧ್ಯಾಹ್ನದ ನಂತರ ಶಾಲೆ ಆರಂಭ ಕುರಿತು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

Key words:  Today- announcement – opening – 1st to 5th– grade school- Education Minister -BC Nagesh.