‘ಮ’ ಧಾರವಾಹಿ ಸರಣಿ ಮುಂದುವರಿಸಿದ ಟಿ.ಎನ್.ಸೀತಾರಾಮ್! ಹೊಸ ಸೀರಿಯಲ್ ‘ಮತ್ತೆ ಮನ್ವಂತರ’ ಘೋಷಣೆ

ಬೆಂಗಳೂರು, ಏಪ್ರಿಲ್ 12, 2021 (www.justkannada.in): ಟಿ.ಎನ್.ಸೀತಾರಾಮ್ ಮತ್ತೆ ಹೊಸ ಧಾರಾವಾಹಿಯೊಂದಿಗೆ ಮರಳಿ ಕಿರುತೆಗೆ ಬರುತ್ತಿದ್ದಾರೆ.

ಹೊಸ ಧಾರಾವಾಹಿ ನಿರ್ದೇಶಿಸುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಸೀತಾರಾಮ್ ಅವರು ಇದೀಗ ಅದರ ಹೆಸರನ್ನು ಘೋಷಿಸಿದ್ದಾರೆ.

ಅಂದಹಾಗೆ ಧಾರವಾಹಿ ಹೆಸರು ‘ಮತ್ತೆ ಮನ್ವಂತರ’.

ವಿಶೇಷ ಅಂದರೆ ಸೀತಾರಾಮ್ ಅವರು ತಮ್ಮ ಧಾರಾವಾಹಿಗಳಿಗೆ ‘ಮ’ ಅಕ್ಷರದಿಂದಲೇ ಹೆಸರಿಡುತ್ತಾರೆ. ಈ ಹಿಂದೆ,  ‘ಮಾಯಾಮೃಗ’, ‘ಮುಕ್ತ’, ‘ಮುಕ್ತ-ಮುಕ್ತ’, ಮಹಾ ಪರ್ವ’, ‘ಮಗಳು ಜಾನಕಿ’ ಧಾರಾವಾಹಿ ನಿರ್ದೇಶಿಸಿದ್ದರು.