ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ.

 

ಬೆಂಗಳೂರು, ಅ.31, 2019 : (www.justkannada.in news ) : ಶಾಲಾ ಪಠ್ಯದಿಂದ ‘ ಮೈಸೂರು ಹುಲಿ ‘ ಬಿರುದಾಂಕಿತ ಟಿಪ್ಪು ಸುಲ್ತಾನ್ ರ ಪಠ್ಯ ಕೈಬಿಡುವ ಸಂಬಂಧ ತಕ್ಷಣಕ್ಕೆ ರಾಜ್ಯ ಸರಕಾರ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು…..

ಟಿಪ್ಪು ಸುಲ್ತಾನ್ ರ ಕುರಿತಾದ ವಿಷಯಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ದೂರು ಬಂದಿವೆ ಅದನ್ನ ಆಧರಿಸಿ ಪರಿಶೀಲಿಸುವಂತೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ( Director of State Education Research and Training ಮತ್ತು Karnataka Textbooks Society -KTBS ) ಸೂಚಿಸಿದ್ದೇವೆ. ನವೆಂಬರ್ ೭ ರಂದು ಈ ಸಮಿತಿ ಸದಸ್ಯರು ಸಭೆ ಸೇರಲಿದ್ದಾರೆ. ಅವರು ಪರಿಶೀಲಿಸಿದ ಬಳಿಕ ಸರಕಾರದ ಗಮನಕ್ಕೆ ತರುತ್ತಾರೆ. ಆ ನಂತರ ಅದರ ಬಗ್ಗೆ ಕ್ರಮತೆಗೆದುಕೊಳ್ತೇವೆ.

ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ದೂರು ಕೊಟ್ಟಿದ್ದಾರೆ. ಶಾಸಕರು ಕೊಟ್ಟ ಮನವಿ ಪರಿಗಣಿಸಲೇ ಬೇಕಲ್ಲ. ಹೀಗಾಗಿ ಪಠ್ಯ ತೆಗೆಯುವ ಬಗ್ಗೆ ಚಿಂತನೆ ನಡೆದಿದೆ ಅಷ್ಟೆ. ವಿಧಾನಸೌಧದಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ.

key words : tipu.sultan-book-karnataka-bjp-sureshkumar-KTBS-DSERT

ENGLISH SUMMARY

According to experts, however, unless the Director of State Education Research and Training and Karnataka Textbooks Society (KTBS) decides on the curriculum nothing can be changed in the textbooks.
A couple of days ago, Minister for Primary and Secondary Education S Suresh Kumar had written to KTBS and said that within three days a committee should look into the letter written by
madikere mla apachu ranjan and give the department a report on the same.