ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರಿಂದಲೇ ಟೈಮ್ ಬಾಂಬ್ ಫಿಕ್ಸ್- ಜಗದೀಶ್ ಶೆಟ್ಟರ್ ಹೇಳಿಕೆ

ಹುಬ್ಬಳ್ಳಿ,ಮೇ,14,2019(www.justkannada.in): ರಾಜ್ಯದ   ದೋಸ್ತಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಸಮಯ ನಿಗದಿ ಮಾಡಿ ಬಟನ್ ಒತ್ತಿದ್ರೆ ಬಾಂಬ್ ಸ್ಪೋಟ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಫಿಕ್ಸ್ ಮಾಡಿರುವ ಟೈಮ್ ಬಾಂಬ್  ಮೇ. 23ರ ಫಲಿತಾಂಶದ ಬಳಿಕ ಸ್ಪೋಟಗೊಳ್ಳಲಿದೆ. ಸಿದ್ದರಾಮಯ್ಯ ಆ ಬಾಂಬ್ ನ ಬಟನ್ ಒತ್ತುತ್ತಾರೆ. ನಂತರ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಈಗ ಮೈತ್ರಿ ಸರ್ಕಾರದ ಎಲ್ಲಾ ಗೊಂದಲಗಳ ಕೇಂದ್ರ ಬಿಂದು ಅಂದರೇ ಅದು ಸಿದ್ದರಾಮಯ್ಯ. ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು ಸಿದ್ದರಾಮಯ್ಯಗೆ ಬೇಕಾಗಿಲ್ಲ. ನಾಲ್ಕು ವರ್ಷದ ನಂತರ ಖಾಲಿಯಾಗುವ ಸಿಎಂ ಹುದ್ದೆಗೆ ಮುಂದಿನ ಸಿಎಂ ನಾನೇ ಅಂತಾರೆ. ತಮ್ಮ ಬೆಂಬಲಿಗರಿಂದ ಹೇಳಿಕೆ ನೀಡಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.

Key words: Time bomb- fix- by- Siddaramaiah – alliance government- Jagadish Shettar