ಚಾಮರಾಜನಗರ,ಆಗಸ್ಟ್,15,2025 (www.justkannada.in): ಚಾಮರಾಜನಗರ ಬಂಡಿಪುರ ಕುಂದುಕೆರೆ ವಲಯದಲ್ಲಿ ಎರಡು ಹುಲಿಗಳು ಕಾದಾಟ ನಡೆಸಿದ್ದು ಈ ವೇಳೆ ಜಮೀನನಲ್ಲಿ ನಿತ್ರಾಣಗೊಂಡು ಹುಲಿ ಬಿದ್ದಿದೆ.
ಕುಂದುಕೆರೆ ಹೆಗ್ಗವಾಡಿ ಗ್ರಾಮಗಳ ನಡುವೆ ಜಮೀನಿನೊಂದರಲ್ಲಿ ಹುಲಿ ಸುಸ್ತಾಗಿ ಬಿದ್ದಿದೆ. ಟೆರಿಟರಿಯಲ್ ಫೈಟಿಂಗ್ ನಡೆದು ಎರಡು ಹುಲಿಗಳ ನಡುವೆ ಕಾದಾಟವಾಗಿ ಹುಲಿ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯ ಕುಂದುಕೆರೆ ರೇಂಜ್ ನಲ್ಲಿ ಈ ಘಟನೆ ನಡೆದಿದ್ದು ಹುಲಿ ಕಂಡ ಗ್ರಾಮಸ್ಥರು ಕುತೂಹಲದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಜನರ ಕೂಗಾಟದಲ್ಲೂ ಮೇಲೇಳಲಾಗದೆ ಹುಲಿ ಅಲ್ಲೇ ಬಿದ್ದಿದ್ದು, ನಿತ್ರಾಣಗೊಂಡು ಬಿದ್ದಿರುವ ದೃಶ್ಯ ಗ್ರಾಮಸ್ಥರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಸ್ಥಳಕ್ಕಾಗಿಮಿಸಿರುವ ಅರಣ್ಯ ಸಿಬ್ಬಂದಿ ಹುಲಿಗೆ ಚಿಕಿತ್ಸೆ ನೀಡಲು ಸಿದ್ದತೆ ನಡೆಸಿದ್ದಾರೆ.
Key words: Fight, tigers, Fatigue, Chamaraja nagar