ಹುಣಸೂರು.ಡಿ.10,2025: ತಾಲೂಕಿನ ಹನಗೋಡು ಸಮೀಪ ಮುಂದುವರಿದ ಹುಲಿ ದಾಳಿ ಕಾಟ. ಬಿ.ಆರ್.ಕಾವಲ್‌ನಲ್ಲಿ ಹಸು, ಗೌಡಿಕೆರೆಯಲ್ಲಿ ಟಗರನ್ನು ಭೇಟೆಯಾಡಿದ ವ್ಯಾಘ್ರ, ಹೆಮ್ಮಿಗೆ ಗ್ರಾಮದ ಬಳಿ ಖುದ್ದು ದರ್ಶನ ನೀಡಿ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿತು. ಪರಿಣಾಮ ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ.
ಮಂಗಳವಾರ ಮದ್ಯರಾತ್ರಿ ನಾಗರಹೊಳೆ ಉದ್ಯಾನದಂಚಿನ ಬಿ.ಆರ್.ಕಾವಲ್ ಗ್ರಾಮದಲ್ಲಿನ ಕೊಟ್ಟಿಗೆಗೆ ನುಗ್ಗಿದ ಹುಲಿ ಹಸು ಕೊಂದಿದೆ. ಈ ವೇಳೆ ಇತರೆ ಜಾನುವಾರುಗಳ ಅರಚಾಟದಿಂದ ಎಚ್ಚರವಾದಾಗ ಹುಲಿ ಹಸುವನ್ನು ಎಳೆದೊಯ್ಯುತ್ತಿರುವುದನ್ನು ಕಂಡು ಗಾಬರಿಯಿಂದ ಕೂಗಿದಾಗ ಹುಲಿ ಹಸುವಿನ ಶವ ಬಿಟ್ಟು ಕಾಡಿನತ್ತ ಪರಾರಿ. ಇದೇ ಹುಲಿ ಮತ್ತೆ ಬುಧವಾರ ಮದ್ಯಾಹ್ನ 12ರ ವೇಳೆಯಲ್ಲಿ ಪ್ರತ್ಯಕ್ಷವಾಗಿ ಬೇಟೆಯಾಡಿದ್ದ ಹಸುವನ್ನು ತಿನ್ನಲು ಯತ್ನಿಸಿತು. ಇದನ್ನು ಕಂಡ ಜನತೆ ಗಾಬರಿಯಿಂದ ಕೂಗಿಕೊಂಡಾಗ ಸ್ಥಳದಿಂದ ಕಣ್ಮರೆ.

ಹಾಡು ಹಗಲೇ ಟಗರು ಬಲಿ:
ಮತ್ತೊಂದೆಡೆ ಬಿ.ಆರ್.ಕಾವಲ್‌ನ ಪಕ್ಕದ ಅರಣ್ಯದಂಚಿನ ಗೌಡಿಕೆರೆ ಬಳಿಯಲ್ಲಿ ಹುಲಿಯು ಟಗರೊಂದನ್ನು ಕೊಂದು ಹಾಕಿದೆ. ಹೊಲದಲ್ಲಿದ್ದ ಹುಲಿ ಕಂಡ ರೈತರು ಕೂಗಾಟ ನಡೆಸಿದ್ದರಿಂದ ಕಾಡಿನತ್ತ ಪರಾರಿಯಾಗಿದೆ.

ಸಾಕಾನೆಗಳ ಸಹಾಯದಿಂದ ಕೂಂಬಿಂಗ್ :
ಹುಲಿ ಅವಾಂತರದಿಂದ ಹೈರಾಣಾಗಿರುವ ಗ್ರಾಮಸ್ಥರ ಮನವಿ ಮೇರೆಗೆ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ವನ್ಯಜೀವಿ ವಿಭಾಗದವರು ಜಂಟಿಯಾಗಿ ಸಾಕಾನೆಗಳಾದ ಭೀಮ, ಏಕಲವ್ಯ, ವರಲಕ್ಚ್ಮೀ ಜತೆಗೆ ಕೂಂಬಿಂಗ್ ಆರಂಭಿಸಿದ್ದಾರೆ. ಎರಡು ಥರ್ಮಲ್ ಡ್ರೋಣ್ ಮುಖಾಂತರ ಹೆಮ್ಮಿಗೆ ಬಳಿ ಅರಣ್ಯದಂಚಿನಲ್ಲಿ ಕಾರ್ಯಚರಣೆ.
ನಾಗರಹೊಳೆ ಉದ್ಯಾನದ ಪಶು ವೈದ್ಯ ಡಾ.ರಮೇಶ್‌ರೊಂದಿಗೆ ಬುಧವಾರ ಸಂಜೆಯಿಂದ ಕೂಂಬಿಂಗ್ ಆರಂಭ. ಹುಲಿ ಮುತ್ತುರಾಯನಹೊಸಹಳ್ಳಿ ಅರಣ್ಯ ಪ್ರದೇಶದ ಕಡೆಗೆ ತೆರಳಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇದೀಗ ರಾತ್ರಿಯೂ ಕೂಂಬಿಂಗ್ ನಡೆಸಲಾಗುತ್ತಿದೆ ಎಂದು ಎಸಿಎಫ್ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
ಕೂಂಬಿಂಗ್ ಗೆ 150 ಸಿಬ್ಬಂದಿ:
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ.ಗಳಾದ ಸುಬ್ರಮಣಿ, ನಂದಕುಮಾರ್ ನೇತೃತ್ವದಲ್ಲಿ ಆನೆ ಮತ್ತು ಚಿರತೆ ಟಾಸ್ಕ್ ಫೋರ್ಸ್ನ ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
key words: Tiger attacks continue, Forest Department, combing, trained elephants

SUMMARY:
Tiger attacks continue: Forest Department begins combing with the help of trained elephants

The tiger attack continues near Hanagodu in Hunsur taluk. The tiger, which hunted a cow in B.R. Kaval and a ram in Gaudikere, made its appearance near Hemmige village, causing panic among the villagers. As a result, the villagers are demanding the capture of the tiger.






