ಅಪಘಾತ ಪ್ರಕರಣ : ಅಪ್ಪ ಜೈಲಿಗೆ, ಮಗ ಬಾಲಮಂದಿರಕ್ಕೆ

ಮೈಸೂರು,ಡಿಸೆಂಬರ್,14,2020(www.justkannada.in) :  ನಗರದಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರ ಸಾವಿನ ಪ್ರಕರಣ ಸಂಬಂಧ ಪುತ್ರ(ಬಾಲಕ)ನಿಗೆ ಕಾರು ನೀಡಿದ್ದ ತಂದೆ ಜೈಲು ಪಾಲಾಗಿದ್ದು, ಬಾಲಕನನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ.

I didn't knew CM BSY will think so cheaply - KPCC President D.K. Shivakumar

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನ

ಕಳೆದ ಗುರುವಾರ ರಾತ್ರಿ ಮೈಸೂರು – ಬೆಂಗಳೂರು ರಸ್ತೆಯ ದಂಡಿಮಾರಮ್ಮನ ದೇವಸ್ಥಾನದ ಬಳಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಮೂರು ವರ್ಷದ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರಿನಲ್ಲಿ ಅಪಘಾತ ಮಾಡಿದ ಬಾಲಕನ ತಂದೆಯ ಐಡಿ ಕಾರ್ಡ್ ಪತ್ತೆ

ಅಪಘಾತದ ನಂತರ ಕಾರು ಚಲಾಯಿಸುತ್ತಿದ್ದ ಬಾಲಕ ಹೆದರಿದ  ತನ್ನ ಕುಟುಂಬದವರಿಗೆ ಕರೆ ಮಾಡಿ ಕಾರನ್ನು ಅಲ್ಲಿಯೇ ಬಿಟ್ಟು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಹಾಗೂ ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ತನಿಖೆ ಕೈಗೊಂಡು ಕಾರನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭ ಕಾರಿನಲ್ಲಿ ನದೀಮ್ ಎಂಬ ವ್ಯಕ್ತಿಗೆ ಸಂಬಂಧಿಸಿದ ಐಡಿ ಕಾರ್ಡ್​ ಸಿಕ್ಕಿದೆ.

ಟ್ರೈಯಲ್​​ಗಾಗಿ ಇಟ್ಟಿದ್ದ ಕಾರ್ ಮನೆಗೆ, 14 ವರ್ಷದ ಮಗನಿಂದ ಅಪಘಾತ

ಕಾರ್ ಶೋ ರೂಮ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಟ್ರೈಯಲ್​​ಗಾಗಿ ಇಟ್ಟಿದ್ದ ಕಾರನ್ನು ಸಂಜೆ ಮನೆಗೆ ತೆಗೆದುಕೊಂಡು ಹೋಗಿದ್ದ. ಆ ಸಂದರ್ಭದಲ್ಲಿ ನದೀಮ್​ನ 14 ವರ್ಷದ ಮಗ ಕಾರನ್ನು ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದಾನೆ ಎಂದು ತನಿಖೆ ಬಳಿಕ ತಿಳಿದು ಬಂದಿದೆ.

ತಂದೆ ಜೈಲಿಗೆ, ಮಗ ಬಾಲಮಂದಿರಕ್ಕೆ

Three-deaths-single-family-Dad-jail-son-ballroom

ತಂದೆಯ ಬೇಜವಾಬ್ದಾರಿ ತನದಿಂದ ಈ ಘಟನೆ ನಡೆದಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಸೆಕ್ಷನ್ 304ರ ಪ್ರಕಾರ ತಂದೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಅಪ್ರಾಪ್ತ  ಮಗನನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

key words : Three-deaths-single-family-Dad-jail-son-ballroom