ವೀಕೆಂಡ್ ಟ್ರಿಪ್ ಗೆ ತೆರಳಿದ್ದ ವೇಳೆ  ಮೂವರು ಜಲಾಶಯದಲ್ಲಿ ಮುಳುಗಿ ಸಾವು.

ಚಿಕ್ಕಬಳ್ಳಾಪುರ,ಏಪ್ರಿಲ್,1,2023(www.justkannada.in): ಟ್ರಿಪ್ ಗೆಂದು ತೆರಳಿದ್ದ 6 ಜನರ ಪೈಕಿ ಮೂವರು ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವತಿಯರು ಮತ್ತು ಓರ್ವ ಯುವಕ ಸಾವನ್ನಪ್ಪಿದ್ದಾರೆ. ಬೆಂಗಳೂರಿನ  ಸಾರಾಯಿಪಾಳ್ಯದ ರಾಧಿಕಾ, ಪೂಜಾ, ಇಮ್ರಾನ್ ಮೃತಪಟ್ಟವರು. ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮೂವರು ಸೇರಿ 6 ಮಂದಿ ವೀಕೆಂಡ್  ಟ್ರಿಪ್ ಗೆಂದು ಶ್ರೀನಿವಾಸ ಸಾಗರ ಜಲಾಶಯಕ್ಕೆ ಆಗಮಿಸಿದ್ದರು. ಈ ವೇಳೆ ಈಜಲು ಇಳಿದಿದ್ದ ರಾಧಿಕಾ, ಪೂಜಾ, ಇಮ್ರಾನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Key words: Three people-death- drowned – reservoir – weekend trip.