ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು.

ಹಾವೇರಿ,ಮಾರ್ಚ್, 4,2024(www.justkannada.in):  ಸಾಲಬಾಧೆಗೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಯಲವಿಗೆ ರೈಲು ನಿಲ್ದಾಣದ ಬಳಿ ನಡೆದಿದೆ.

ಮಂಜುನಾಥ್ ತೇಲಿ, ರೇಣವ್ವ, ಸಾವಕ್ಕ ಮೃತಪಟ್ಟವರು. ಆತ್ಮಹತ್ಯೆ ಶರಣಾದವರು  ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದವರು ಎಂದು ತಿಳಿದುಬಂದಿದೆ. ಮೊದಲು ರೈಲಿಗೆ ಸಿಲುಕಿ ಮಂಜುನಾಥ್ ತೇಲಿ ಆತ್ಮಹತ್ಯೆಗೆ ಶರಣಾಗಿದ್ದು,  ಪುತ್ರನನ್ನು ರಕ್ಷಿಸಲು ಹೋಗಿ ತಾಯಿ ರೇಣವ್ವ ಕೂಡ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ಪುತ್ರನ ಸಾವಿನ ಸುದ್ದಿ ತಿಳಿದು ಸಾವಕ್ಕ ಎಂಬುವವರು ಗೋನಾಳ ಗ್ರಾಮದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಟ್ರ್ಯಾಕ್ಟರ್ ಸಾಲ ಪಾವತಿ ವಿಚಾರವಾಗಿ ಮಂಜುನಾಥ್ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಬಳಿಕ ರೈಲುಗೆ ಸಿಲುಕಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Key words: Three members – same family -committed -suicide