ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು ಸಾವು.

ದಕ್ಷಿಣ ಕನ್ನಡ,ಮಾರ್ಚ್,25,2023(www.justkannada.in):  ಕೆಲಸ ನಿರ್ವಹಿಸುತ್ತಿದ್ದ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಸೋಮಶೇಖರ ರೆಡ್ಡಿ(45), ಶಾಂತ (40) ಸೇರಿ ಮೂವರು ಮೃತಪಟ್ಟವರು. ಸೋಮಶೇಖರ ರೆಡ್ಡಿ, ಶಾಂತ ಗದಗ ಜಿಲ್ಲೆಯ ಮುಂಡರಗಿ ಮೂಲದವರು.

ಮನೆಯೊಂದರ ಹಿಂದೆ ಬೃಹತ್ ‍ಗುಡ್ಡವನ್ನ ಕಡಿಯಲಾಗಿತ್ತು ಅದರೆ ಕೆಳಗೆ ಪಿಲ್ಲರ್ ಹಾಕಿ  ತಡೆಗೋಡೆ ನಿರ್ಮಿಸುವ ಕಾಮಕಾರಿ ನಡೆಯುತ್ತಿತ್ತು. 7 ಕಾರ್ಮಿಕರು ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಗುಡ್ಡ ಕುಸಿದಿದ್ದು ಈ ವೇಳೆ ಮೂವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನ ಹೊರತೆಗೆದಿದ್ದು ಸುಳ್ಯ ಆಸ್ಪತ್ರೆ ಶವಗಾರಕ್ಕೆ ಶವಗಳನ್ನ ರವಾನಿಸಲಾಗಿದೆ. ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Three- laborers -died – collapsed – mud-Dakshina kannada