ವಿದ್ಯುತ್ ಕಂಬದಿಂದ ಬಿದ್ದು ಮೂರು ಮಂದಿ ನೌಕರರಿಗೆ ಗಂಭೀರ ಗಾಯ.

ಮೈಸೂರು, ನವೆಂಬರ್,5,2020(www.justkannada.in):  ವಿದ್ಯುತ್ ಕಂಬದಿಂದ ಬಿದ್ದು ಮೂರು ಮಂದಿ  ನೌಕರರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದಿದೆ.jk-logo-justkannada-logo

ಬನ್ನೂರು ವಿಭಾಗೀಯ ಚೆಸ್ಕಾಂ ನೌಕರರಾದ ತ್ಯಾಗರಾಜು, ಮಹೇಂದ್ರ, ಮಲ್ಲೇಶ್ ಗಾಯಗೊಂಡ ಕೆಇಬಿ ನೌಕರರು. ಕೆಲಸ ನಿರ್ವಹಿಸುತ್ತಿರುವ ವೇಳೆ ವಿದ್ಯುತ್ ಬ್ಯಾಟರಿಯಿಂದ ರಿಟರ್ನ್ ಆಗಿದ್ದು,ಈ ವೇಳೆ ಕಂಬದಿಂದ ಬಿದ್ದು ಮೂರು ಮಂದಿ ನೌಕರರು ಗಾಯಗೊಂಡಿದ್ದಾರೆ. ವಿದ್ಯುತ್ ಕಂಬದಿಂದ ಬೀಳುತ್ತಿರುವ ದೃಶ್ಯವನ್ನ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.Three employees – seriously- injured- after- falling - power pole.

ಇನ್ನು ಗಾಯಾಳುಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಗಾಯಾಳುಗಳನ್ನ  ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

Key words: Three employees – seriously- injured- after- falling – power pole.