ಕೇವಲ ಮೂರು ದಿನದ ಅಧಿವೇಶನ ಸರಿಯಲ್ಲ- ಮಾಜಿ ಸಚಿವ ಆರ್.ವಿ ದೇಶಪಾಂಡೆ…..

ಬೆಂಗಳೂರು,ಅ,10,2019(www.justkannada.in):  ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ಕೇವಲ ಮೂರು ದಿನದ ಅಧಿವೇಶನಕ್ಕೆ ಮಾಜಿ ಸಚಿವ ಆರ್.ವಿ ದೇಶಪಾಂಡೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಆರ್.ವಿ ದೇಶಪಾಂಡೆ, ಮೂರು ದಿನದ ಅಧಿವೇಶನ ಖಂಡಿತ ಸರಿಯಲ್ಲ. ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಾನಿ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ. ಹಾಗೂ ಮಾಧ್ಯಮಗಳಿಗೆ ವಿಧಾನಮಂಡಲ ಅಧಿವೇಶನಕ್ಕೆ ನಿರ್ಬಂಧದ ಬಗ್ಗೆ ಚರ್ಚೆಸಬೇಕು ಹೀಗಾಗಿ ಅಧಿವೇಶನ ಅವಧಿ ವಿಸ್ತರಿಸುವಂತೆ ಮನವಿ ಮಾಡುತ್ತೇವೆ ಎಂದರು.

ಇನ್ನು ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಅಭಿನಂದನೆ ಸಲ್ಲಿಸುವುದಾಗಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದರು.

Key words:  three-day -session -not okay-Former Minister- RV Deshpande.