Friday, September 25, 2026

BDA Apartments

Home Crime ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು.

ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು.

ರಾಮನಗರ,ಮೇ,17,2024 (www.justkannada.in):  ನದಿಯಲ್ಲಿ ಈಜಲು ಇಳಿದಿದ್ದ ಮೂವರು ಬಾಲಕರು  ನೀರು ಪಾಲಾಗಿರುವ  ಘಟನೆ ರಾಮನಗರದಲ್ಲಿ ನಡೆದಿದೆ.

ಅಚಲು ಗ್ರಾಮದ ಬೆಟ್ಟದ ಸಮೀಪದಲ್ಲಿ ಈ ಘಟನೆ ಸಂಭವಿಸಿದೆ. ಸಬಾದ್ (14), ಸುಲ್ತಾನ್ (13), ರಿಯಾಜ್ ಖಾನ್ (15) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರು.  ಮೂವರು ಕೂಡ ರಾಮನಗರದ ಮೆಹಬೂಬ್ ನಗರದ ನಿವಾಸಿಗಳು ಎನ್ನಲಾಗಿದೆ. ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು water death

ಶಾಲೆಗೆ ರಜೆ ಇದ್ದ ಕಾರಣ 8 ಮಂದಿ ಸಹಪಾಟಿಗಳು ಅಚ್ಚಲು ಗ್ರಾಮದ ಬಳಿಯ ಬೆಟ್ಟದ ನದಿಯಲ್ಲಿ ಈಜಲು ತೆರಳಿದ್ದರು .ಈ ವೇಳೆ ಮೂವರು ವಿದ್ಯಾರ್ಥಿಗಳು ಈಜಲು ಇಳಿದಿದ್ದು, ಈ ಸಂದರ್ಭದಲ್ಲಿ ಈಜು ಬಾರದೆ ಮೂವರು ನೀರುಪಾಲಾಗಿದ್ದಾರೆ.  ಮೃತದೇಹವನ್ನ ಹೊರ ತೆಗೆಯಲಾಗಿದೆ. ಈ ಕುರಿತು ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  three boys , death ,swimming , drowned.