ಬೆಂಗಳೂರು,ಆಗಸ್ಟ್,26,2025 (www.justkannada.in): ಕೇಸರಿ ಶಾಲು ಹಾಕಿದ್ದಕ್ಕೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಬ್ರೇಜ್, ಇಮ್ರಾನ್ ಖಾನ್ ಹಾಗೂ ಅಜೀಝ್ ಖಾನ್ ಬಂಧಿತ ಆರೋಪಿಗಳು. ಕೇಸರಿ ಶಾಲು ಹಾಕಿದ್ದಕ್ಕೆ ಆಗಸ್ಟ್ 24ರಂದು ರಾತ್ರಿ ಸುರೇಂದ್ರ ಕುಮಾರ್ ಮೇಲೆ ಮೂವರು ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಮೂವರು ಆರೋಪಿಗಳನ್ನ ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
Key words: Three, arrested, assault, wearing, saffron