Tuesday, August 4, 2026

BDA Apartments

Home Crime ರಾಮೇಶ್ವರಂ ಕೆಫೆ ಮಾದರಿಯಲ್ಲೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸಿಎಂ ಮತ್ತ ಡಿಸಿಎಂಗೆ ಬೆದರಿಕೆ ಮೇಲ್

ರಾಮೇಶ್ವರಂ ಕೆಫೆ ಮಾದರಿಯಲ್ಲೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸಿಎಂ ಮತ್ತ ಡಿಸಿಎಂಗೆ ಬೆದರಿಕೆ ಮೇಲ್

ಬೆಂಗಳೂರು,ಮಾರ್ಚ್,5,2024(www.justkannada.in):  ಇತ್ತೀಚೆಗೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಮಾದರಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬೆದರಿಕೆ ಮೇಲ್ ಬಂದಿದೆ.

2.5 ಮಿಲಿಯನ್ ಡಾಲರ್ ಕೊಟ್ಟಿಲ್ಲ ಅಂದ್ರೆ ಬಸ್ , ರೈಲು, ಬಸ್ ಸ್ಟಾಂಡ್ ಸೇರಿ ಹಲವಾರು ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸಿಎಂ, ಗೃಹಸಚಿವರು, ಡಿಸಿಎಂಗೆ ಬೆದರಿಕೆ ಇ ಮೇಲ್ ಬಂದಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ರಾಮೇಶ್ವರ ಕೆಫೆ ಮಾದರಿಯಲ್ಲಿ ಬಾಂಬ್ ಬ್ಲಾಸ್ಟ್  ಮಾಡುವುದಾಗಿ ಬೆದರಿಕೆ ಮೇಲ್ ಬಂದಿದೆ.  ಸಿಎಂ ನನಗೂ ಮೊನ್ನೆಯೇ ಬೆದರಿಕೆ ಮೇಲ್ ಬಂದಿದೆ. ಮೇಲ್ ಅನ್ನು ಪೊಲೀಸ್ ಆಯುಕ್ತರಿಗೆ ರವಾನಿಸಿದ್ದೇವೆ  ಶಾಹಿದ್ ಖಾನ್ ಎಂಬಾತನಿಂದ ಮೇಲ್ ಬಂದಿದೆ. ಅಲರ್ಟ್ 1ರಲ್ಲಿ   2.5 ಮಿಲಿಯನ್ ಡಾಲರ್ ಕೊಡಬೇಕು. ಕೊಡದಿದ್ದರೇ ಕೆಎಸ್ ಆರ್ ಟಿಸಿ ಅಂಬಾರಿ ಉತ್ಸವ ಬಸ್ ಬ್ಲಾಸ್ಟ್ ಮಾಡುವುದಾಗಿ  ಅಲರ್ಟ್ 2 ಎಂದು ಮೇಲ್ ನಲ್ಲಿ ಬರೆಯಲಾಗಿದೆ ಎಂದು ತಿಳಿಸಿದರು.

Key words: Threat mail – CM -DCM – bomb blast – Rameswaram cafe