‘ತಿಥಿ’ ಸಿನಿಮಾ ಖ್ಯಾತಿಯ ‘ಗಡ್ಡಪ್ಪ’ ಇನ್ನಿಲ್ಲ

ಮಂಡ್ಯ,ನವೆಂಬರ್,11,2025 (www.justkannada.in): ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನರಾಗಿದ್ದಾರೆ.

ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ @ ಚನ್ನೇಗೌಡ (89) ಕೊನೆಯುಸಿರೆಳೆದಿದ್ದಾರೆ. ತಿಥಿ ಸಿನಿಮಾದ ಮೂಲಕ ಗಡ್ಡಪ್ಪ ಅಂತಾನೇ ಚನ್ನೇಗೌಡ ಫೇಮಸ್ ಆಗಿದ್ದರು. ಮೂಲ ಹೆಸರು ಚನ್ನೇಗೌಡ ಆದರೂ ಗಡ್ಡಪ್ಪ ಅಂತಾಲೇ ಕರೆಸಿಕೊಳ್ಳುತ್ತಿದ್ದರು.

ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ  ಗಡ್ಡಪ್ಪ ಅಭಿನಯಿಸಿದ್ದು, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಗಡ್ಡಪ್ಪ ಬಳಲುತ್ತಿದ್ದರು ಎನ್ನಲಾಗಿದೆ

ತಿಂಗಳ ಹಿಂದೆ ಬಿದ್ದು ಸೊಂಟ ಪೆಟ್ಟಾಗಿ, ಆಪರೇಷನ್ ಆಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ  ಗಡ್ಡಪ್ಪ ಸಾವನ್ನಪ್ಪಿದ್ದು, ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೃತ ಗಡ್ಡಪ್ಪ ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ.

Key words: Thithi, movie, Gaddappa, no more, Mandya