ಈ ಸರ್ಕಾರ ಇರುವುದು ಮೂರು ತಿಂಗಳಷ್ಟೇ- ಭವಿಷ್ಯ ನುಡಿದ ಶಾಸಕ…

 

ಬೆಂಗಳೂರು,ಮಾರ್ಚ್ ,6,2021(www.justkannada.in): ಈ ಸರ್ಕಾರ ಇರುವುದು ಮೂರು ತಿಂಗಳಷ್ಟೇ. ಇವರ ಸರ್ಕಾರ ಬಿದ್ದು‌ಹೋಗುತ್ತದೆ. ನಂತರ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್,  ಸಿಎಂ ಬಿಎಸ್ ವೈ, ಸಚಿವ ಕೆ.ಎಸ್ ಈಶ್ವರಪ್ಪ ಅವರ ಹಗರಣಗಳ ಬಗ್ಗೆ ಗೊತ್ತಿದೆ. ಎಲ್ಲವನ್ನೂ ಬಹಿರಂಗ ಮಾಡುತ್ತೇನೆ. ಇವರ ಸರ್ಕಾರ ಬಿದ್ದು‌ಹೋಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದರು.

ನಮ್ಮ ಶಾಸಕರಿಗೆ ಬೆಲೆಯಿಲ್ಲದಂತಾಗಿದೆ. ವಿಧಾನಸೌಧದ ಪಾವಿತ್ರ್ಯ ಹಾಳಾಗಿದೆ, ನನ್ನ ಮೇಲೆ ಕೇಸ್ ಹಾಕಿದ್ದಾರೆ. ವಿಧಾನಸಭೆಯಲ್ಲಿ ಅಮಾನತು ಮಾಡಿದ್ದಾರೆ ಎಂದು ಸಂಗಮೇಶ್ ಕಿಡಿಕಾರಿದರು.this-government-only-three-months-away-mla-sangamesh

ಮುಂಗಳವಾರ ನಮ್ಮ ಕುಟುಂಬದ ಜತೆ  ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.  ಎಸ್.ಪಿ ಕಚೇರಿ ಮುಂದೆ ನಮ್ಮ ನಾಯಕರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆಯವರು ಧರಣಿ ಮಾಡುತ್ತಾರೆ ಎಂದು ಸಂಗಮೇಶ್ ತಿಳಿಸಿದರು.

Key words: This government – only -three months- away-mla sangamesh