ಚರ್ಚಿಸಲು ಅನೇಕ ಸಮಸ್ಯೆಗಳಿದ್ದು, ಹೊಸ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ : ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

ಬೆಂಗಳೂರು,ಡಿಸೆಂಬರ್,06,2020(www.justkannada.in) : ನಾಳೆಯಿಂದ ಸದನ ಆರಂಭ, ಇನ್ನೂ ಅಜೆಂಡಾ ಗೊತ್ತಿಲ್ಲ. ಚರ್ಚಿಸಲು ಅನೇಕ ಸಮಸ್ಯೆಗಳಿದ್ದು, ಹೊಸ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.logo-justkannada-mysoreಸಿದ್ದರಾಮಯ್ಯ ನಿವಾಸದಲ್ಲಿ ಸಭೆಯ ಬಳಿಕ ಅವರು ಮಾತನಾಡಿ, ಮೂರು ಬಾರಿ ಪ್ರವಾಹ ಸಮಸ್ಯೆ ಎದುರಾಗಿದೆ. ಆದರೆ, ಇದಕ್ಕೆ ಪರಿಹಾರ ನೀಡಿಲ್ಲ. ಈ ಕುರಿತು ಸದನದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು ಎಂದರು.

ವಿದ್ಯುತ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಅನಗತ್ಯವಾಗಿ ವಿದ್ಯುತ್ ಖರೀದಿಯಾಗುತ್ತಿದೆ. ಮನೆಗಳ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಬೇಕಾದವರಿಗೆ ಅನ್ ಲಾಕ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಪಕ್ಷದವರಿಗೆ ಲಾಕ್ ಮಾಡ್ತಾರೆ ಎಂದು ಕಿಡಿಕಾರಿದರು.

There-are-many-issues-discussed-new-issue-being-raised-Opposition-leader-Siddaramaiah

key words : There-are-many-issues-discussed-new-issue-being-raised-Opposition-leader-Siddaramaiah