ವಿದ್ಯಾರ್ಥಿಗಳ ‘ಲಾಂಗ್ ಲವ್’!: ಯುವಕನನ್ನು ಹೆದರಿಸಲು ಲಾಂಗ್ ಇಟ್ಟುಕೊಂಡು ಕಾದಿದ್ದ ವಿದ್ಯಾರ್ಥಿಗಳು ಪೊಲೀಸರ ಬಲೆಗೆ!

ಮೈಸೂರು, ಆಗಸ್ಟ್ 17, 2023 (www.justkannada.in): ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.

ರಾಮಕೃಷ್ಣನಗರದ ಡಿ ಬ್ಲಾಕ್ ನಿವಾಸಿ ಸಮರ್ಥ್ (25), ಗಿರಿ ದರ್ಶಿನಿ ಲೇಔಟ್ ನ ಉತ್ಸವ್ (19) ಬಂಧಿತರು.

ಇವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು 2ಲಾಂಗ್, ಕಾರು ವಶಕ್ಕೆ ಪಡೆದಿದ್ದಾರೆ. ಜತೆಗೆ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

ಇವರ ಸ್ನೇಹಿತರಾದ ರಾಹುಲ್, ಮನೋಜ್‌, ದರ್ಶನ್, ಅಭಿ ಮತ್ತು ಮರ್ಡಿನ್ ಎಂಬ ಯುವಕನನ್ನು ಹೆದರಿಸಲು ಕಾರಿನಲ್ಲಿ ರಾಂಗ್‌ಗಳನ್ನಿಟ್ಟು ಕೊಂಡು ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಪ್ಲೆಕ್ಸ್ ಬಳಿ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಕಾರನ್ನು ನಿಲ್ಲಿಸಿಕೊಂಡಿರುವ ಯುವಕರ ತಂಡ ಆನುಮಾನಾಸ್ಪದವಾಗಿ ವರ್ತಿಸುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದಾರೆ. ಪೊಲೀಸರು ಬರುವುದನ್ನು ಕಂಡು ಕೆಲ ಯುವಕರು ಓಡಿ ಹೋಗಿದ್ದಾರೆ. ಇವರಲ್ಲಿ ಸಮರ್ಥ ಮತ್ತು ಉತ್ತಮ್ ಮಾತ್ರ ಪೊಲೀಸರಿಗೆ ಸಿಕ್ಕಿದ್ದಾರೆ. ಲಾಂಗ್‌ಗಳನ್ನು ತೋರಿಸಿ ಬೆದರಿಸಲು ಈ ಯುವಕರು ನಿಂತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ತನಿಖೆ ಮುಂದುವರಿಸಿದ್ದಾರೆ.