ಪ್ರತಿಷ್ಠಿತ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಮುಂದೂಡಿಕೆ

ಪ್ಯಾರಿಸ್‌, ಮಾರ್ಚ್ 19, 2020 (www.justkannada.in): ಪ್ರತಿಷ್ಠಿತ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯನ್ನು ಕೋವಿಡ್ 19 ವೈರಸ್‌ ಕಾರಣದಿಂದ ಮುಂದೂಡಲಾಗಿದೆ.

ಸಂಘಟಕರು ದಿನಾಂಕವನ್ನೂ ಪ್ರಕಟಿಸಿದ್ದಾರೆ. ಅದರಂತೆ ಮೇ 24ರಿಂದ ಜೂ. 7ರ ತನಕ ಪ್ಯಾರಿಸ್‌ನ ಆವೆಯಂಗಳದಲ್ಲಿ ನಡೆಯಬೇಕಿದ್ದ ವರ್ಷದ ಈ ದ್ವಿತೀಯ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಸೆ.20ರಿಂದ ಅ. 4ರ ತನಕ ನಡೆಯಲಿದೆ.

ಅಂದರೆ, ಆಗ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ ಕೂಟವಾದ “ಯುಎಸ್‌ ಓಪನ್‌’ ಮುಗಿದು ಒಂದು ವಾರವಷ್ಟೇ ಆಗಿರುತ್ತದೆ. ಆದರೆ ಯುಎಸ್‌ ಓಪನ್‌ ನ್ಯೂಯಾರ್ಕ್‌ನಲ್ಲಿ ನಿಗದಿಯಂತೆ ನಡೆಯುತ್ತದೋ ಅಥವಾ ಅದು ಕೂಡ ಮುಂದೂಡಲ್ಪಡುವುದೋ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ.

ಈ ನಡುವೆ ಜೂನ್‌-ಜುಲೈಯಲ್ಲಿ ನಡೆಯಬೇಕಿರುವ, ವರ್ಷದ 3ನೇ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಾದ ವಿಂಬಲ್ಡನ್‌ ಟೆನಿಸ್‌ ನಡೆಯುವ ಅಥವಾ ಮುಂದೂಡಲ್ಪಡುವ ಬಗ್ಗೆಯೂ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.