ಆಗಸ್ಟ್’ನಲ್ಲೂ ಸಂಡೇ ಕರ್ಪ್ಯೂ ಮುಂದುವರಿಕೆ ಸಾಧ್ಯತೆ

ಬೆಂಗಳೂರು, ಜುಲೈ 26, 2020 (www.justkannada.in): ರಾಜ್ಯದಲ್ಲಿ ಮತ್ತೆ ಸಂಡೇ ಕರ್ಪ್ಯೂ ಆಗಸ್ಟ್ ನಲ್ಲಿಯೂ ಮುಂದುವರೆಯುವ ಸಾಧ್ಯತೆ ಇದೆ.

ಲಾಕ್ ಡೌನ್ ಸಡಿಲಿಕೆಯ ನಡುವೆ ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಕರ್ಪ್ಯೂ ಹೇರಲಾಗಿತ್ತು. ಆಗಸ್ಟ್ ನಲ್ಲಿಯೂ ಸಂಡೇ ಲಾಕ್ ಡೌನ್ ಮುಂದುವರೆಯುವುದಕ್ಕೆ ಸಿಎಂ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಇನ್ನೂ 3 ವಾರ ಸಂಡೇ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗಿದೆ. ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಬೇಕಿದೆ.