ಮೈಸೂರಿನಿಂದ ಹೊರ ಜಿಲ್ಲೆಗೆ ಹೋಗುವವರ ಸಂಖ್ಯೆಯೇ ಹೆಚ್ಚು

ಮೈಸೂರು, ಮೇ 19, 2020 (www.justkannada.in): ಮೈಸೂರಿನಿಂದ ಹೊರ ಜಿಲ್ಲೆಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ.

ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ಇನ್ನಿತರೆಡೆ ಸಂಚರಿಸುವವರ ಸಂಖ್ಯೆ ಹೆಚ್ಚಿದೆ. ಆದರೆ ನಗರಪ್ರದೇಶದಲ್ಲಿ ಸಂಚರಿಸುವವರ ಸಂಖ್ಯೆ ವಿರಳವಾಗಿದೆ.

ಬೆಳಗ್ಗಿನಿಂದ ವಾಹನ ಸಂಚಾರ ಆರಂಭವಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಓಡಾಟ ಇರುವುದರಿಂದ 7 ಗಂಎ ಅವಧಿಯಲ್ಲಿ ತಲುಪುವ ಪ್ರದೇಶಗಳಿಗೆ(ಊರು) ಸಂಚಾರ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಾಗಿ ಪ್ರಯಾಣಿಕರು ಬರುವ ರೂಟ್‍ನಲ್ಲಿ ಬಸ್ ಬಿಡಲಾಗುವುದು. ಪ್ರತಿ ಕಂಡಕ್ಟರ್ ಮತ್ತು ಡ್ರೈವರ್‍ಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಪ್ರತಿ ಪ್ರಯಾಣಿಕರ ಮೊಬೈಲ್ ಸಂಖ್ಯೆ ಪಡೆದು ಸಂಚಾರಕ್ಕೆ ಅವಕಾಶ ಕೊಡಲಾಗಿದೆ.