ಮೈಸೂರು,ಆಗಸ್ಟ್,7,2025 (www.justkannada.in): ಇಲ್ಯೂಮಿನೇಟಿಂಗ್ ವಿಂಡೋಸ್ ತಂಡದ ವತಿಯಿಂದ ಆಗಸ್ಟ್ 10 ಭಾನುವಾರದಂದು ನಟನ ರಂಗಶಾಲೆಯಲ್ಲಿ ಸಂಜೆ, 6.30 ಗಂಟೆಗೆ ‘ದಿ ಗುಡ್ ಡಾಕ್ಟರ್ ‘ ಎಂದು ನಾಟಕ ಪ್ರದರ್ಶನವಾಗಲಿದೆ.
ಅಂದು ಸಂಜೆ 6.30ರಿಂದ 8.30 ರವರಿಗೂ ನಟನ ರಂಗಶಾಲೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಈವರೆಗೆ 19 ಯಶಸ್ವಿ ಪ್ರದರ್ಶನಗಳನ್ನು ಬೆಂಗಳೂರು, ಮೈಸೂರು ಹಾಗೂ ಹೆೈದರಾಬಾದ್ ನಗರಗಳಲ್ಲಿ ಕಂಡಿದ್ದು – ಎರಡನೇ ಬಾರಿಗೆ ಮೈಸೂರಿಗೆ ಬರಲಿದೆ. 2 ತಾಸಿನ ಈ ನಗೆ ನಾಟಕವನ್ನು
ಟಿಕೆಟ್ “ಡಿಸ್ಟ್ರಿಕ್ಟ್ ”ಪ್ಲಾಟ್ ಫಾರ್ಮ್ ನಲ್ಲಿ ಹಾಗೂ ನಟನ ರಂಗಶಾಲೆಯಲ್ಲಿ ಕೂಡ ಲಭ್ಯವಿದೆ. ಮೂಲತಃ ರಷ್ಯಾದಲ್ಲಿ 70ರ ದಶಕದ ಕಾಲಮಾನದ ಅಂಟಾನ್ ಚೆಕೊವ್ ಅವರ ಕಥೆಗಳನ್ನು , ಅಮೇರಿಕದ ನಾಟಕಕಾರ ನೀಲ್ ಸೆೈಮನ್ ಅವರಿಂದ ರಚಿಸಲ್ಪಟ್ಟ ಹಾಸ್ಯ- ಹೃದಯಸ್ಪರ್ಶಿ ನಾಟಕ ಇದಾಗಿದೆ. ನಾಟಕವನ್ನು 1970 ರ ದಶಕದ ಭಾರತಕ್ಕೆ ಅಳವಡಿಸಲಾಗಿದ್ದು, ಭಾರತದ 4 ರಾಜ್ಯಗಳಲ್ಲಿ ಅಂದರೆ ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಗಳಲ್ಲಿ ನಾಟಕ ತೆರೆದುಕೊಳ್ಳುತ್ತದೆ.
4 ಸಣ್ಣ ಕಥಾಹಂದರಗಳುಳ್ಳ ಈ ನಾಟಕ ಶುರುವಾಗುವುದು ಓರ್ವ ಬರಹಗಾರನ ಕಥೆಯಿಂದ. ಅನಾಮಿಕನಾಗಿ ಉಳಿಯುವ ಈ ಸಂತ್ರಸ್ತ ಬರಹಗಾರ, ಕಥೆಯ ಮಜಲುಗಳೊಡನೆ ಹೋರಾಡುತ್ತಾ, ತನ್ನ ಕಲ್ಪನಾ ಲೋಕಕ್ಕೆ ನೋಡುಗರನ್ನು ನಗುವಿನ ಅಲೆಯಲ್ಲಿ ನಿಮ್ಮನ್ನು ತೋಯಿಸುತ್ತಾ ವಿಡಂಬನೆಯ ಲೇಪವಿರುವ 4 ಸಣ್ಣ ಜಗತ್ತುಗಳನ್ನು ಸೃಷ್ಟಿಸುತ್ತಾ ನೋಡುಗರನ್ನು ರಂಜಿಸುತ್ತಾನೆ.
ಈ ನಾಟಕವನ್ನು ಭಾರತಕ್ಕೆ, ಸೃಜನಶೀಲವಾಗಿ , ಶ್ರೀಲಲಿತ ಪಮಿಡಿಪಾಟಿ ಅವರು ಅಳವಡಿಸಿದ್ದು ಅವರೆೇ ನಾಟಕದ ರಂಗರೂಪ ಹಾಗೂ ನಿರ್ದೇಶನ ಕೂಡ ಮಾಡಿದ್ದಾರೆ. ನಾಟಕದ ಡ್ರಾಮಾಟರ್ಜಿಯನ್ನು ದೀಪಕ್ ಸುಬ್ರಹ್ಮಣ್ಯ ಮಾಡಿದ್ದು, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇವರು, ಈ ನಾಟಕದಲ್ಲಿ ಬರಹಗಾರನ ಪಾತ್ರದಲ್ಲಿ ಕಾಣಿಸುಕೊಳ್ಳುತ್ತಾರೆ. ಉಳಿದಂತೆ, ರಂಗಭೂಮಿ ಹಾಗೂ ಕಿರುತೆರೆಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿರುವ ಇಲ್ಯೂಮಿನೇಟಿಂಗ್ ವಿಂಡೋಸ್ ತಂಡದ ಕಲಾವಿದರು ನಾಟಕದ ವಿವಿಧ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಸಂಗೀತ ಸಂಯೋಜನೆ ಹಾಗೂ ಹಿನ್ನೆಲೆ ಸಂಗೀತವನ್ನು ಎಂ.ಎಸ್.ಪ್ರಸನ್ನ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಸಂಬಿತ್ ದೆೇಬ್ ನಾಥ್ ಮಾಡಿದ್ದಾರೆ. ನಿರ್ವಹಣೆಯನ್ನು ಕಾರ್ತಿಕ್ ನಂಜುಂಡ ಮಾಡಲಿದ್ದಾರೆ. ನಾಟಕದ ನಿರ್ಮಾಣವನ್ನು ಇಲ್ಯೂಮಿನೇಟಿಂಗ್ ವಿಂಡೋಸ್ ಸಂಸ್ಥೆ ಮಾಡಿದೆ.
Key words: Mysore, The Good Doctor, Drama, Aug 10th