ಬದಲಾಗಿದೆ ಡೈನಾಮಿಕ್ ಹೀರೋ ದೇವರಾಜ್ ಅವತಾರ!

ಬೆಂಗಳೂರು, ಸೆಪ್ಟೆಂಬರ್ 22 (www.justkannada.in): ಉಸಿರೇ ಉಸಿರೇ ಚಿತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್ ಅವರು ಡಿಸೋಜಾ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ.

ಹೌದು. ಸ್ಯಾಂಡಲ್​ವುಡ್ ಡೈನಾಮಿಕ್ ಹೀರೋ ನಿರ್ದೇಶಕರ ಆಸೆಯಂತೆ ವಿಶೇಷ ಪಾತ್ರಗಳಿಗೆ ತಮ್ಮನ್ನ ತಾವು ಬದಲಿಸಿಕೊಳ್ಳುತ್ತಾರೆ. ಇದೀಗ ಅದರಂತೆ ಉಸಿರೇ ಉಸಿರೇ ಚಿತ್ರಕ್ಕೆ ಕಂಪ್ಲೀಟ್ ಬದಲಾಗಿದ್ದಾರೆ.

ದೇವರಾಜ್ ಅವರ ಜನ್ಮ ದಿನಕ್ಕೆ ದೇವರಾಜ್ ಅವರ ಲುಕ್ ಅನ್ನ ಉಸಿರೇ ಉಸಿರೇ ತಂಡ ಈಗ ರಿವೀಲ್ ಮಾಡಿದೆ.

ದೇವರಾಜ್ ಅವರು ಅಭಿನಯದ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹೀರೋ. ಈ ಚಿತ್ರದಲ್ಲಿ ದೇವರಾಜ್ ಅವರ ಜೊತೆಗೂ ರಾಜೀವ್ ಸ್ಕ್ರೀನ್ ಹಂಚಿಕೊಂಡಿದ್ದಾರೆ.