Thursday, September 17, 2026

BDA Apartments

ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದಿದ್ದ ಬಿಜೆಪಿ ಮುಖಂಡ ಅಮಾನತು… BDA JK_Adv BD...
Home Front Page ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದಿದ್ದ ಬಿಜೆಪಿ ಮುಖಂಡ ಅಮಾನತು…

ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದಿದ್ದ ಬಿಜೆಪಿ ಮುಖಂಡ ಅಮಾನತು…

ನವದೆಹಲಿ,ಮೇ,17,2019(www.justkannada.in): ಪಾಕ್ ರಾಷ್ಟ್ರ ನಿರ್ಮಾಣವಾಗಲು ಗಾಂಧಿ ಅವರ ಆಶೀರ್ವಾದವಿದೆ. ಹೀಗಾಗಿ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ  ಅನಿಲ್ ಸಾಮಿತ್ರರನ್ನ ಬಿಜೆಪಿಯಿಂದ ಅಮಾನತು ಮಾಡಲಾಗಿದೆ.

ಅನಿಲ್ ಸಾಮಿತ್ರ ಮಹಾತ್ಮ ಗಾಂಧಿ ಅವರ ಬಗ್ಗೆ ಮಾತನಾಡಿ,  ನೆಹರು ಮತ್ತು ಮಹಮ್ಮದ್ ಆಲಿ ಜಿನ್ನಾ ಪ್ರಧಾನಿಯಾಗಬೇಕು ಎಂದು ಬಯಸಿದ್ದರು.  ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ನಿರ್ಮಾಣವಾಗಲು ಗಾಂಧಿ ಅವರ ಆಶೀರ್ವಾದವಿದೆ ಎಂದು ಹೇಳಿದ್ದರು. ಈ ಬಗ್ಗೆ ಫೇಸ್ ಬುಕ್ ನಲ್ಲೂ ಹಾಕಿಕೊಂಡಿದ್ದರು.

ಈ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆ ಅನಿಲ್ ಸಾಮಿತ್ರ ಅವರನ್ನ ಬಿಜೆಪಿಯಿಂದ ಅಮಾನತು ಮಾಡಲಾಗಿದೆ.

Key words: The BJP leader said that Mahatma Gandhi was the father of Pakistan. bjp leader suspended..

#Political news #bjp # NewDelhi #suspended