Monday, October 19, 2026

Dasara Wishes

Happy Dasara
Home Front Page ಅಯೋಧ್ಯೆ ತೀರ್ಪು ಯಾರ ಸೋಲು ಅಲ್ಲ, ಗೆಲುವು ಅಲ್ಲ: ಪ್ರಧಾನಿ ನರೇಂದ್ರ ಮೋದಿ

ಅಯೋಧ್ಯೆ ತೀರ್ಪು ಯಾರ ಸೋಲು ಅಲ್ಲ, ಗೆಲುವು ಅಲ್ಲ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನವೆಂಬರ್ 09, 2019 (www.justkannada.in): ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಾಂತಿ, ಸಾಮರಸ್ಯಕ್ಕೆ ಕರೆ ನೀಡಿದ್ದಾರೆ.

ಅಯೋಧ್ಯೆಯ ತೀರ್ಪು ಯಾರ ಗೆಲುವೂ ಅಲ್ಲ ಯಾರ ಸೋಲೂ ಅಲ್ಲ” ಎಂದು ಸರಣಿ ಟ್ವೀಟ್ ಗಳಲ್ಲಿ ತಿಳಿಸಿರುವ ಅವರು ಸಾಮರಸ್ಯ ಕಾಪಾಡುವುದು ದೇಶದ ಜನರ ಆದ್ಯತೆಯಾಗಬೇಕು ಎಂದಿದ್ದಾರೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದೆ. ಇದಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಈ ಅವಧಿಯಲ್ಲಿ ಸಾಮರಸ್ಯ ಕಾಪಾಡಲು ಸಮಾಜದ ಎಲ್ಲಾ ವಿಭಾಗಗಳು ನಡೆಸುವ ಪ್ರಯತ್ನಗಳು ಪ್ರಶಂಸಾರ್ಹ ಎಂದು ಹೇಳಿದ್ದಾರೆ.