‘ತಲೈವಿ’ಗೂ ಕೊರೊನಾ ಕಾಟ! ರಿಲೀಸ್ ಡೇಟ್ ಮುಂದಕ್ಕೆ

ಬೆಂಗಳೂರು, ಏಪ್ರಿಲ್ 10, 2021 (www.justkannada.in): ಬಹುನಿರೀಕ್ಷಿತ ಚಿತ್ರ ತಲೈವಿ ಬಿಡುಗಡೆಯ ದಿನಾಂಕ ಮುಂದೂಡಲಾಗಿದೆ.

ತಮಿಳುನಾಡು ಸಿಎಂಆಗಿದ್ದ ದಿ. ಜಯಲಲಿತಾ ಜೀವನಚರಿತ್ರೆಯನ್ನಾಧರಿಸಿದ ಚಿತ್ರದಲ್ಲಿ ಕಂಗನಾ ನಟಿಸಿದ್ದು, ಪೋಸ್ಟರ್, ಫಸ್ಟ್ ಲುಕ್ ಗಳಿಂದಲೇ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಕೊರೊನಾ ಪ್ರಕರಣಗಳು ಹೆಚ್ಚಳ ಹಿನ್ನಲೆ ಹಾಗೂ ಲಾಕ್ ಡೌನ್ ಕಾರಣದಿಂದ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ಈ ಚಿತ್ರವನ್ನು ಏಪ್ರಿಲ್ 23ರಂದು ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.