Saturday, August 22, 2026

BDA Apartments

Home Cinema ನಾಳೆ ತಲೈವಾ ಹುಟ್ಟುಹಬ್ಬ: ‘ಲಾಲ್ ಸಲಾಂ’ ಟ್ರೇಲರ್ ರಿಲೀಸ್

ನಾಳೆ ತಲೈವಾ ಹುಟ್ಟುಹಬ್ಬ: ‘ಲಾಲ್ ಸಲಾಂ’ ಟ್ರೇಲರ್ ರಿಲೀಸ್

ಬೆಂಗಳೂರು, ನವೆಂಬರ್ 11, 2023 (www.justkannada.in): ನಾಳೆ (ಡಿಸೆಂಬರ್ 12) ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟು ಹಬ್ಬ. ಇದೇ ದಿನ ರಜನಿಕಾಂತ್ ಪುತ್ರಿ ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆದಿದೆ. ಸಿನಿಮಾದ ಪೋಸ್ಟರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌’ವುಳ್ಳ ಪೋಸ್ಟರ್ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ.

1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್  ನೆನಪನ್ನು ತಲೈವಾ ಮಾಡಿಸುತ್ತಿದ್ದಾರೆ.