‘ತಲೈವರ್ 170’ ಸಿನಿಮಾ ಫಸ್ಟ್ ಲುಕ್ ರಿಲೀಸ್: ರಜನಿ ಫ್ಯಾನ್ಸ್ ಫುಲ್ ಖುಷ್ !

ಬೆಂಗಳೂರು, ಅಕ್ಟೋಬರ್ 05, 2023 (www.justkannada.in): ಸೂಪರ್ ‍ಸ್ಟಾರ್  ರಜನಿಕಾಂತ್ ನಟನೆಯ ‘ತಲೈವರ್ 170’ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಸಾರಥ್ಯದಲ್ಲಿ ‘ತಲೈವರ್ 170′ ಸಿನಿಮಾ ನಿರ್ಮಾಣ ಆಗುತ್ತಿದ್ದು, ಬಿಗ್ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

ಅಂದಹಾಗೆ ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ʼತಲೈವರ್ 170ʼ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರತಂಡ ಬಿಡುಗಡೆ ಮಾಡಿರುವ ರಜನಿ ಫಸ್ಟ್ ಲುಕ್ ಲುಕ್ ಕಂಡು ಅಭಿಮಾನಿಗಳು ತ್ರಿಲ್ ಆಗಿದ್ದಾರೆ.

32 ವರ್ಷದ ಬಳಿಕ ಮೊದಲ ಬಾರಿಗೆ ರಜಿನಿ – ಬಿಗ್‌ ಬಿ ಜೊತೆಯಾಗಿ ನಟಿಸಲಿದ್ದಾರೆ. ಇನ್ನು ಈಗಾಗಲೇ ಸಿನಿಮಾದಲ್ಲಿ ಮಲಯಾಳಂ ಸಿನಿಮಾರಂಗದಿಂದ ಫಾಹದ್ ಫಾಸಿಲ್ ಅವರು ಕಾಣಿಸಿಕೊಳ್ಳಲಿದ್ದಾರೆ.

ಟಾಲಿವುಡ್‌ ರಂಗದಿಂದ ರಾಣಾ ದಗ್ಗುಬಾಟಿ ಹಾಗೂ ಮಾಲಿವುಡ್ ನಟಿ ಮಂಜು ವಾರಿಯರ್, ನಟಿ ರಿತಿಕಾ ಸಿಂಗ್‌ ಹಾಗೂ ದುಶಾರ ವಿಜಯನ್‌ ಕೂಡ ಸಿನಿಮಾದಲ್ಲಿದ್ದಾರೆ.