ಥಾಯ್ಲೆಂಡ್, AUG.30,2025: ಥಾಯ್ಲೆಂಡ್‌ನ ನ್ಯಾಯಾಲಯ ಪೆಟೊಂತಾರ್ನ್ ಶಿನೊವಾತ್ರಾ ಅವರನ್ನು ಪ್ರಧಾನಮಂತ್ರಿ ಸ್ಥಾನದಿಂದ ವಜಾಗೊಳಿಸಿದೆ.
ಕಾಂಬೊಡಿಯಾ ಸೆನೆಟ್‌ನ ಅಧ್ಯಕ್ಷರಾಗಿರುವ ಹುನ್ ಸೆನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ವೇಳೆ ಶಿನೊವಾತ್ರಾ ಅವರು ದೇಶದ ಸಾಂವಿಧಾನಿಕ ನಿಯಮ, ನಿಬಂಧನೆ ಉಲ್ಲಂಘಿಸಿರುವ ಕಾರಣ ನ್ಯಾಯಾಲಯ ಈ ಕ್ರಮ ಜರುಗಿಸಿದೆ. ಇದರಿಂದ ವರ್ಷದ ಹಿಂದಷ್ಟೇ ಪ್ರಧಾನಿ ಹುದ್ದೆಗೇರಿದ್ದ ಪೆಟೊಂತಾರ್ನ್ ಶಿನೊವಾತ್ರಾ ಅವರು ಅಧಿಕಾರವಧಿ ಪೂರ್ಣವಾಗುವ ಮೊದಲೇ ಪ್ರಧಾನಿ ಸ್ಥಾನದಿಂದ ಕೆಳಗಿಳಿದಂತಾಗಿದೆ.
ಹುನ್ ಸೆನ್ ಜತೆಗಿನ ಶಿನೊವಾತ್ರಾ ಅವರ ದೂರವಾಣಿ ಸಂಭಾಷಣೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜುಲೈ 1ರಂದು ನ್ಯಾಯಾಲಯ ಸಮ್ಮತಿಸಿತ್ತು. ಅಂದೇ ಶಿನೊವಾತ್ರಾ ಅವರನ್ನು ಅಮಾನತುಗೊಳಿಸಿ, ಉಪ ಪ್ರಧಾನಿ ಫುಮಾಮ್ ಅವರಿಗೆ ಹಂಗಾಮಿ ಅಧಿಕಾರ ನೀಡಲಾಗಿತ್ತು.
ಪ್ರಧಾನಿ ಸ್ಥಾನದಿಂದ ಶಿನೊವಾತ್ರಾ ಕೆಳಗಿಳಿದರೂ ಹೊಸ ಪ್ರಧಾನಿ ಅಯ್ಕೆಗೆ ಸಂಸತ್ತು ಒಪ್ಪಿಗೆ ನೀಡುವವರೆಗೆ ಫುಮಾಮ್ ನೇತೃತ್ವದ ಸಂಪುಟವು ಹಂಗಾಮಿ ಸರ್ಕಾರವಾಗಿ ಅಧಿಕಾರದಲ್ಲಿ ಇರುವ ನಿರೀಕ್ಷೆ ಇದೆ. ಜತೆಗೆ ಇದೇ ಸಂಪುಟವು ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ಅವಕಾಶವನ್ನೂ ನೀಡಬಹುದಾಗಿದೆ.
ಹುನ್ ಸೆನ್ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಪೆಟೊಂತಾರ್ನ್ ಶಿನೊವಾತ್ರಾ ಬಹಳ ಆತ್ಮೀಯವಾಗಿ ಮಾತನಾಡಿದ್ದರು. ಅಲ್ಲದೇ, ಅವರೊಂದಿಗೆ ರಾಷ್ಟ್ರೀಯ ಭದ್ರತೆ ಕುರಿತಾದ ವಿಚಾರಗಳನ್ನು ಚರ್ಚಿಸುವುದು ಮಾತ್ರವಲ್ಲದೆ ಥಾಯ್ಲೆಂಡ್‌ನ ಸೇನಾ ಜನರಲ್ ಬಗೆಗಿನ ಅಸಮಾಧಾನದ ಬಗ್ಗೆಯೂ ಹೇಳಿಕೊಂಡಿದ್ದರು. ಈ ಸಂಭಾಷಣೆ ಅಡಿಯೊ ಸೋರಿಕೆಯಾಗುತ್ತಿದ್ದಂತೆಯೇ ಪೆಟೊಂತಾರ್ನ್ ಶಿನೊವಾತ್ರಾ ಅವರ ರಾಜೀನಾಮೆಗೂ ಒತ್ತಡ ಹೆಚ್ಚಾಗಿತ್ತು.
key words: Thailand, PM, Shinowatra, resigns , prime minister
SUMMARY:
Thailand: Shinowatra resigns as prime minister.
A Thai court has dismissed Prime Minister Phetorn Shinawatra. The court ruled that Shinawatra violated the country’s constitutional rules and regulations during a telephone conversation with Cambodian Senate President Hun Sen. This means that Phetorn Shinawatra, who took office just a year ago, has stepped down from the post before the end of her term.