ಸಾಹಿತಿಗಳ ಪಠ್ಯ ವಾಪಾಸ್ ಚಳವಳಿಯು ಟೂಲ್ ಕಿಟ್ ನಾ ಒಂದು ಭಾಗ- ಸಂಸದ ಪ್ರತಾಪ್ ಸಿಂಹ ಕಿಡಿ.

ಮೈಸೂರು,ಜೂನ್,1,2022(www.justkannada.in):  ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತಿಗಳು ತಮ್ಮ ಪಠ್ಯ ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ಹಿನ್ನೆಲ್ಲೆ ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಸಾಹಿತಿಗಳ ಪಠ್ಯ ವಾಪಾಸ್ ಚಳವಳಿ ಟೂಲ್ ಕಿಟ್ ನಾ ಒಂದು ಭಾಗ. ಪಠ್ಯ ವಾಪಸ್ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವವರು ವಿಚಾರಹೀನರು. ತರ್ಕದಲ್ಲಿ ಇವರು ಗೆಲ್ಲಲು ಆಗಲ್ಲ. ಹೀಗಾಗಿ ಹೊಸ ತರಕಾರು ಶುರು ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಬರಗೂರು ರಾಮಚಂದ್ರಪ್ಪ ಅವರು ಕುವೆಂಪು ಅವರ 8 ಪಠ್ಯ ಇದ್ದುದ್ದನ್ನು 7 ಮಾಡಿದರು. ನಾವು ಈಗ ಕುವೆಂಪು ಅವರ 10 ಪಠ್ಯ ಸೇರಿಸಿದ್ದೇವೆ.  ಸಿದ್ದರಾಮಯ್ಯ ಆಡಳಿತ ವ್ಯಂಗ್ಯ ಮಾಡಲು 2017ರಲ್ಲಿ ಯಾರೋ ಬರೆದ ಗೀತೆಯನ್ನು ಚಕ್ರತೀರ್ಥ ವಾಟ್ಸ್ ಫ್ ಫಾರ್ವಡ್ ಮಾಡಿದ್ದಾರೆ. ಆ ಕೇಸ್ ಈಗಾಗಲೇ ಬಿ ರೀಪೋರ್ಟ್ ಆಗಿದೆ. ಕಾಂಗ್ರೆಸ್ ಈಗ ನೆಲ ಕಚ್ಚಿದೆ. ಕಾಂಗ್ರೆಸ್ ನಿಂದ ಉಪಕೃತರಾದ ಸಾಹಿತಿಗಳು ಈಗ ತಗಾದೆ ತೆಗೆದಿದ್ದಾರೆ.  ಕಮಲ ಹಂಪನಾ, ಬರಗೂರು ರಾಮಚಂದ್ರಪ್ಪ ಹಾದಿಯಾಗಿ ಯಾರು ಕಳೆದ 10 ವರ್ಷಗಳಲ್ಲಿ ನೆನಪಿಡೋ ಕೃತಿ ರಚನೆ ಮಾಡಿದ್ದಾರೆ ಹೇಳಿ.? ಎಂದು ಟೀಕಿಸಿದರು.

ಎಲ್ಲಾ ವಾದದಲ್ಲೂ ಸೋತ ಮೇಲೆ ಈಗ ವಾಟ್ಸ್ ಆಫ್ ಫಾರ್ವಡ್ ಮೇಸೇಜ್ ಹಿಡಿದು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಸಾಹಿತಿಗಳ ಪಠ್ಯ ವಾಪಾಸ್ ಚಳವಳಿ ಟೂಲ್ ಕೀಟ್ ನಾ ಒಂದು ಭಾಗ. ದೇವನೂರು ಮಹದೇವ್ ಸೇರಿದಂತೆ ಹಲವರ ಪಠ್ಯವನ್ನು 10 – 12 ವರ್ಷದಿಂದ ಮಕ್ಕಳು ಓದಿದ್ದಾರೆ. ಈಗ ಕೆಲವರ ಪಠ್ಯ ಕೈ ಬಿಟ್ಟಿದ್ದೇವೆ. ತಮ್ಮ ಪಠ್ಯ ಕೈ ಬಿಟ್ಟಿದ್ದರು ಕೂಡ ಕೆಲ ಸಾಹಿತಿಗಳು ಪಠ್ಯ ವಾಪಾಸ್ ಪಡೆದಿದ್ದೇವೆ ಎಂದು ಪತ್ರ ಬರೆದಿದ್ದಾರೆ.  ಇದರಲ್ಲಿ ಅರ್ಥವಿದೆಯಾ.? ಎಂದು ಪ್ರಶ್ನಿಸಿದರು.

ಸಾಹಿತಿ ಹಂಪಾ ನಾಗರಾಜ ಅಕಾಡೆಮಿಗೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಪತ್ನಿ ಇನ್ನೂ ಹುದ್ದೆಯಲ್ಲೇ ಇದ್ದಾರೆ.  ಅದರ ಅರ್ಥ ಮನೆಯಲ್ಲೆ ಸಮ್ಮತಿ ಇಲ್ಲ ಅಂತಾ ಎಂದು ಪ್ರತಾಪ್ ಸಿಂಹ ಹರಿಹಾಯ್ದರು.

Key words: Text Vapas –Movement- Tool kit -MP Pratap simha