ಹೊನಲು ಬೆಳಕಿನಲ್ಲಿ ಟೆಸ್ಟ್ ಕ್ರಿಕೆಟ್, ಶೀಘ್ರ ನಿರ್ಧಾರ: ಸೌರವ್ ಗಂಗೂಲಿ

ಕೊಲ್ಕತ್ತಾ, ಅಕ್ಟೋಬರ್ 26, 2019 (www.justkannada.in): ಹೊನಲು ಬೆಳಕಿನಲ್ಲಿ ಟೆಸ್ಟ್ ಆಯೋಜನೆಯ ಬಗ್ಗೆ ಆಸಕ್ತಿ ಇದೆ. ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಟೆಸ್ಟ್ ಮಾದರಿಯ ಜನಪ್ರಿಯತೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ. ನಾವೆಲ್ಲರೂ ಸೇರಿ ಇದಕ್ಕೊಂದು ರೂಪುರೇಷೆ ರಚಿಸಬೇಕು ಎಂದು ಗಂಗೂಲಿ ಹೇಳಿದ್ದಾರೆ.

‘ಹಿತಾಸಕ್ತಿ ಸಂಘರ್ಷ ನಿಯಮ ಕ್ರಿಕೆಟ್‌ ಉತ್ಕೃಷ್ಠತೆಯನ್ನು ಹೆಚ್ಚಿಸುವಂತಿರಬೇಕು. ವಿವಿಎಸ್ ಲಕ್ಷ್ಮಣ್, ಸುನಿಲ್ ಗಾವಸ್ಕರ್, ಕಪಿಲ್ ದೇವ್, ಅಜರುದ್ದೀನ್ ಅವರಂತಹ ಹಲವಾರು ಕ್ರಿಕೆಟಿಗರ ಅನುಭವ ಮತ್ತು ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ನಿಯಮ ಸಹಕಾರಿಯಾಗಬೇಕು ಎಂದು ತಿಳಿಸಿದ್ದಾರೆ.