ರಷ್ಯಾದಿಂದ ಮತ್ತೆ ತಾತ್ಕಾಲಿಕ ಕದನ ವಿರಾಮ ಘೋಷಣೆ.

ಕೀವ್,ಮಾರ್ಚ್,7,2022(www.justkannada.in):  ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 12 ದಿನಗಳು ಕಳೆದಿದ್ದು ದಾಳಿಯನ್ನ ರಷ್ಯಾ ಸೈನಿಕರು ಮುಂದುವರೆಸಿದ್ದಾರೆ. ಈ ಮಧ್ಯೆ ನಾಗರೀಕರ ಹಿತದೃಷ್ಠಿಯಿಂದ ಇದೀಗ ಮತ್ತೆ ರಷ್ಯಾ ಕದನ ವಿರಾಮ ಘೋಷಿಸಿದೆ.

ಉಕ್ರೇನ್ ರಾಜಧಾನಿ ಕೀವ್ ಸೇರಿ 4 ನಗರಗಳಲ್ಲಿ ರಷ್ಯಾಕದನ ವಿರಾಮ ಘೋಷಣೆ ಮಾಡಿದೆ. ಕೀವ್ ಕಾರ್ಖೀವ್ ಸುಮಿನಗರ ಮರಿಯುಪೋಲ್ ನಲ್ಲಿ  ಕದನ ವಿರಾಮ ಘೋಷಣೆ ಮಾಡಲಾಗಿದೆ, ನಾಗರೀಕರ ಹಿತದೃಷ್ಟಿಯಿಂದ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ನಗರಗಳನ್ನು ಬಿಟ್ಟು ತೊರೆಯಲು ಜನರಿಗೆ ಸೂಚನೆ ನೀಡಲಾಗಿದೆ.

ಉಕ್ರೇನ್‌ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ಚೆರ್ನೋಬಿಲ್, ಝಫೋರಿಝೀಯಾ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ. ಈ ನಡುವೆ ರಷ್ಯಾ ದಾಳಿಗೆ ಉಕ್ರೇನ್ ಎದುರೇಟು ನೀಡುತ್ತಿದ್ದು, ಯುದ್ಧ ಮುಂದುರೆಸಿದೆ.

Key words: Temporary-Ceasefire -Declaration – Russia.