Monday, September 14, 2026

BDA Apartments

ತೆಲುಗು “BIG BOSS” ನಲ್ಲಿ ಹವಾ ಎಬ್ಬಿಸಿದ ಕನ್ನಡಿಗ “ನಿಖಿಲ್ ಮಾಳಿಯಕ್ಕಲ್” ..! BDA JK_Adv...
Home Cinema ತೆಲುಗು “BIG BOSS” ನಲ್ಲಿ ಹವಾ ಎಬ್ಬಿಸಿದ ಕನ್ನಡಿಗ “ನಿಖಿಲ್ ಮಾಳಿಯಕ್ಕಲ್” ..!

ತೆಲುಗು “BIG BOSS” ನಲ್ಲಿ ಹವಾ ಎಬ್ಬಿಸಿದ ಕನ್ನಡಿಗ “ನಿಖಿಲ್ ಮಾಳಿಯಕ್ಕಲ್” ..!

Nikhil Maliyakkal, a Kannadiga who created a buzz in Telugu "BIG BOSS"..!

 

Nikhil, who originally trained as a dancer, first acted as the lead in the Kannada movie “Ooty.” He also has ties to theater, which is why he’s been making a name for himself in other states too.

ಮೈಸೂರು, ಸೆ.17,2024: (www.justkannada.in news) ತೆಲುಗಿನ ಬಿಗ್‌ ಬಾಸ್‌ ನಲ್ಲಿ ಈಗ ಕನ್ನಡಿಗ, ಮೈಸೂರು ಯುವಕನದ್ದೆ ಹವಾ. ಕೆಲ ವರ್ಷಗಳ ಹಿಂದೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದ ನಿಖಿಲ್‌, ಬಳಿಕ ಹಿಂದಿರುಗಿ ನೋಡಿದ್ದೆ ಇಲ್ಲ.

ಮೈಸೂರಿನ ಹಿರಿಯ ಪತ್ರಕರ್ತ ಕೆ.ಶಶಿಕುಮಾರ್ ಹಾಗೂ ಸುಲೇಖಾ ದಂಪತಿಗಳ ಪುತ್ರ ನಿಖಿಲ್‌ ಮಾಳಿಯಕ್ಕಲ್.‌

ಹಿನ್ನೆಲೆ:

ಮೈಸೂರಿನ ಬೇಡನ್ ಪೊವೆಲ್ ಸ್ಕೂಲ್ ಮತ್ತು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಿಖಿಲ್, ಬಳಿಕ  ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ನಲ್ಲಿ ಡಿಪ್ಲೊಮಾ ಇನ್ ಇಂಟೀರಿಯರ್ ಡಿಸೈನಿಂಗ್ ವ್ಯಾಸಂಗ.

ಮೂಲತಃ ಡ್ಯಾನ್ಸರ್ ಆಗಿರುವ ನಿಖಿಲ್ ಮೊದಲಿಗೆ “ಊಟಿ” ಎಂಬ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಅಭಿನಯ. ನಿಖಿಲ್ ಗೆ ರಂಗಭೂಮಿ ನಂಟು ಸಹ ಇದೆ.ಈ ಕಾರಣಕ್ಕೆ ಹೊರ ರಾಜ್ಯದಲ್ಲೂ ಸೈ ಎನಿಸಿಕೊಂಡಿರುವುದು.

“ಮನೆಯೇ ಮಂತ್ರಾಲಯ” ಕನ್ನಡ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ನಿಖಿಲ್  ಅಭಿನಯ ಕಂಡ ತೆಲುಗು ಕಿರುತೆರೆಯ ನಿರ್ಮಾಪಕರಿಂದ ಆಹ್ವಾನ. “ಗೋರಿಂಟಾಕು” ಎಂಬ ತೆಲುಗು ಧಾರಾವಾಹಿಯಲ್ಲಿ ನಾಯಕನಾಗಿ ನಟನೆ.  ನಂತರ ನಿಖಿಲ್‌ ಗೆ ಅವಕಾಶಗಳ ಮಹಾಪೂರ. ನಿರಂತರವಾಗಿ ಒಟ್ಟು 6 ತೆಲುಗು ಧಾರಾವಾಹಿಗಳಲ್ಲಿ ನಾಯಕ ನಟನಾಗಿ ನಿಖಿಲ್‌ ಅಭಿನಯ.

ಇದೀಗ ಟಾಲಿವುಡ್‌ ನ ಸ್ಟಾರ್ ನಟ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗಿನ “ಬಿಗ್ ಬಾಸ್ ಸೀಸನ್ 8” ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಿಖಿಲ್ ಅಭಿಮಾನಿಗಳಿಂದ ದಾಖಲೆಯ 2.50 ಲಕ್ಷ  ಮತಗಳನ್ನು ಪಡೆದು ಇಡೀ ಬಿಗ್ ಬಾಸ್ ತಂಡಕ್ಕೆ ಚೀಫ್ ಆಗಿ ಘೋಷಿಸಲ್ಪಟ್ಟಿದ್ದಾನೆ.

ಕನ್ನಡ ನೆಲದ, ಅದರಲ್ಲೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಯುವಕ ಕನ್ನಡಿಗ ನಿಖಿಲ್  ತೆಲುಗು ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.

key words: Nikhil Maliyakkal, a Kannadiga,created a buzz, Telugu “BIG BOSS”.!

SUMMARY:

ತೆಲುಗು "BIG BOSS" ನಲ್ಲಿ ಹವಾ ಎಬ್ಬಿಸಿದ ಕನ್ನಡಿಗ "ನಿಖಿಲ್ ಮಾಳಿಯಕ್ಕಲ್" ..! nikhel-bigboss nik...

Nikhil, who originally trained as a dancer, first acted as the lead in the Kannada movie “Ooty.” He also has ties to theater, which is why he’s been making a name for himself in other states too.