ಇಂದು ಸಿಬಿಐನಿಂದ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ವಿಚಾರಣೆ

ಬೆಂಗಳೂರು, ಡಿಸೆಂಬರ್ 11, 2022 (www.justkannada.in): ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ ಕವಿತಾ ಅವರನ್ನು ಕೇಂದ್ರ ತನಿಖಾ ದಳ ಇಂದು ವಿಚಾರಣೆ ನಡೆಸಲಿದೆ.

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಇಂದು ವಿಚಾರಣೆಗೊಳಪಡಲಿದ್ದಾರೆ.

ಸಿಬಿಐ ವಿಚಾರಣೆ ಹಿನ್ನೆಲೆಯಲ್ಲಿ ಕವಿತಾ ಅವರ ನಿವಾಸದ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಮನೆಯ ಸಮೀಪಕ್ಕೆ ಯಾರೂ ತೆರಳಲು ಅವಕಾಶವಿಲ್ಲ.

ಟಿಆರ್‌ಎಸ್ ಮೂಲಗಳ ಪ್ರಕಾರ, ನಿವಾಸದಲ್ಲಿ ಅನಗತ್ಯವಾಗಿ ಸೇರದಂತೆ ಪಕ್ಷದ ಕಾರ್ಯಕರ್ತರಿಗೆ ಟಿಆರ್‌ಎಸ್ ಉನ್ನತ ನಾಯಕತ್ವ ಸೂಚನೆ ನೀಡಲಾಗಿದೆ.