ಸೌತಾಂಪ್ಟನ್’ನಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಕ್ವಾರಂಟೈನ್

ಬೆಂಗಳೂರು, ಜೂನ್ 04, 2021 (www.justkannada.in): ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಲಂಡನ್ ತಲುಪಿದ್ದು. ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಭಾರತದ ಪುರುಷರ ಹಾಗೂ ಮಹಿಳಾ ಕ್ರಿಕೆಟ್‌ ತಂಡ ಗಳ ಎಲ್ಲ ಸದಸ್ಯರು ಲಂಡನ್ ತಲುಪಿ ಬಳಿಕ ಸೌತಾಂಪ್ಟನ್‌ಗೆ ತೆರಳಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಭಾರತದ ಪುರುಷರ ಹಾಗೂ ವನಿತಾ ಕ್ರಿಕೆಟ್‌ ತಂಡ ಗಳೆರಡೂ ಸುದೀರ್ಘ‌ ಪ್ರವಾಸಕ್ಕಾಗಿ ಗುರುವಾರ ಲಂಡನ್‌ಗೆ ಆಗಮಿಸಿದವು. ಬಳಿಕ ಇಲ್ಲಿಂದ ಸೌತಾಂಪ್ಟನ್‌ಗೆ ತೆರಳಿ ಕ್ವಾರಂಟೈನ್‌ಗೆ ಒಳಗಾದವು.

ವಿರಾಟ್‌ ಕೊಹ್ಲಿ ಜತೆಗೆ ಪತ್ನಿ ಅನುಷ್ಕಾ ಶರ್ಮ, ಮಗಳು ವಮಿಕಾ ಪಯಣಿಸಿದ್ದರು.