ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ರವಿಶಾಸ್ತ್ರಿಗೆ ಮಹತ್ವದ ಅಧಿಕಾರ ನೀಡಿದ ಸಿಒಎ…

ಮುಂಬೈ,ಜುಲೈ,20: ಮುಂದಿನ ಪ್ರವಾಸದ  ಸಮಯದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಲಿರುವ ಅವರ ಪತ್ನಿ ಅಥವಾ ಪ್ರೇಯಸಿ ಬಗ್ಗೆ ಮಾಹಿತಿ ನೀಡುವಂತೆ ಕೊಹ್ಲಿ ಹಾಗೂ ರವಿಶಾಸ್ತ್ರಿಗೆ ಸಿಒಎ ಸೂಚನೆ ನೀಡಿದೆ.‌

ವಿದೇಶಿ ಪ್ರವಾಸದ ವೇಳೆ ಟೀಂ ಇಂಡಿಯಾ ಆಟಗಾರರನ್ನು ಪತ್ನಿ ಅಥವಾ ಗರ್ಲ್ ಫ್ರೆಂಡ್ ಭೇಟಿಯಾಗ್ಬೇಕೆ ಬೇಡ್ವೆ ಎಂಬ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳುತ್ತಿತ್ತು. ಆದ್ರೀಗ ಈ ಅಧಿಕಾರವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ಗೆ ನೀಡಲಾಗಿದೆ.

ಸಿಒಎ ಸದಸ್ಯರು ಸರ್ವ ಸಮ್ಮತಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಈ ನಿರ್ಧಾರದಿಂದ ಸಂಘರ್ಷವುಂಟಾಗಲಿದೆ. ಜೊತೆಗೆ ಆಟಗಾರರ ಪ್ರದರ್ಶನದ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಬಿಸಿಸಿಐ ಹಾಗೂ ಲೋಧಾ ಸಮಿತಿ ಆರೋಪ ಮಾಡಿದೆ.