ಟೀಂ ಇಂಡಿಯಾಗೆ ಮತ್ತೆ ಸೋಲಿನ ಆಘಾತ: ಆಸೀಸ್ ಮಡಿಲಿಗೆ ಏಕದಿನ ಸರಣಿ

ಅಡಿಲೇಡ್,ಅಕ್ಟೋಬರ್,23,2025 (www.justkannada.in):  ಆಸ್ಟ್ರೇಲಿಯಾ ಆಡಿಲೇಡ್‌ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ.

ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ 2 ವಿಕೆಟ್‌ ಗಳಿಂದ ಟೀಮ್ ಇಂಡಿಯಾವನ್ನು ಸೋಲಿಸುವ ಮೂಲಕ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನ ಗೆಲ್ಲುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.

ಮೊದಲ ಪಂದ್ಯದಲ್ಲೂ ಮುಗ್ಗರಿಸಿದ್ದ ಕ್ಯಾಪ್ಟನ್ ಶುಬ್ಮನ್ ಗಿಲ್ ನೇತೃತ್ವದ ತಂಡ ಎರಡನೇ ಪಂದ್ಯದಲ್ಲೂ ಸೋಲನುಭಸಿತು.    ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಶುಭಮನ್‌ ಗಿಲ್ (9), ವಿರಾಟ್ ಕೊಹ್ಲಿ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. 3ನೇ ವಿಕೆಟ್‌ ಗೆ ಜೊತೆಯಾದ  ರೋಹಿತ್‌ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್‌ ಭರ್ಜರಿ ಶತಕದ ಜೊತೆಯಾಟವಾಡಿದರು.  ಈ ವೇಳೆ ರೋಹಿತ್‌ ಶರ್ಮಾ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿ ಔಟ್ ಆದರು. ಇನ್ನು ಉಪನಾಯಕ ಶ್ರೇಯಸ್‌ ಅಯ್ಯರ್‌ 7 ಬೌಂಡರಿ ನೆರವಿವಿನಿಂದ 61 ರನ್‌ ಸಿಡಿಸಿ  ಔಟ್ ಆದರು

ಭಾರತದ ಪರ ಕೆಎಲ್ ರಾಹುಲ್ 11, ವಾಷಿಂಗ್ಟನ್‌ ಸುಂದರ್‌ 12, ನಿತೀಶ್‌ ಕುಮಾರ್ ರೆಡ್ಡಿ ಆಲ್‌ರೌಂಡರ್ ಅಕ್ಷರ್ ಪಟೇಲ್‌ 44, ಹರ್ಷಿತ್ ರಾಣಾ ಅಜೇಯ 24, ಅರ್ಷದೀಪ್‌ ಸಿಂಗ್ 13 ರನ್‌ ಬಾರಿಸುವ ಮೂಲಕ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 264 ರನ್‌ ಕಲೆ ಹಾಕಿತು.

265 ರನ್ ಗಳ ಗುರಿ ಬೆನ್ನತ್ತಿದ ಆಸೀಸ್ ತಂಡ 46.2 ಓವರ್ ಗೆ 8 ವಿಕೆಟ್ ಕಳೆದುಕೊಂಡು 265 ರನ್ ಗುರಿ ತಲುಪಿ ಜಯ ಸಾಧಿಸಿತು. ಮ್ಯಾಥೂ ಶಾರ್ಟ್ 74, ಕೂಪರ್ ಕೊನಾಲಿ 61 ರನ್ ಬಾರಿಸಿದರು.

Key words: Team India, ODI, series, Australia